ಕರ್ನಾಟಕ

karnataka

ETV Bharat / bharat

ಸಿಎಂ ಮಮತಾರ ಮೇಲೆ ನಡೆದ ಹಲ್ಲೆ ನನ್ನನ್ನು ಟಿಎಂಸಿಗೆ ಸೇರುವಂತೆ ಮಾಡಿತು: ಯಶ್ವಂತ್ ಸಿನ್ಹಾ

ಅಟಲ್​ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಬಿಜೆಪಿಯಲ್ಲಿ ಒಗ್ಗಟ್ಟು, ಒಮ್ಮತವಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರವು ಒಡೆದು ಆಳುವ ಹಾಗೂ ಅತಿಕ್ರಮಣದ ನೀತಿ ಮೇಲೆ ನಂಬಿಕೆಯಿಟ್ಟಿದೆ ಎಂದು ಯಶ್ವಂತ್ ಸಿನ್ಹಾ ಆರೋಪಿಸಿದ್ದಾರೆ.

By

Published : Mar 13, 2021, 1:47 PM IST

Yashwant Sinha
ಯಶ್ವಂತ್ ಸಿನ್ಹಾ

ಕೋಲ್ಕತ್ತಾ: ನಂದಿಗ್ರಾಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದ ಹಲ್ಲೆ ನನ್ನನ್ನು ಟಿಎಂಸಿಗೆ ಸೇರುವಂತೆ ಮಾಡಿದೆ. ಈ ಘಟನೆ ಬಳಿಕ ನಾನು ತೃಣಮೂಲ ಕಾಂಗ್ರೆಸ್​ ಹಾಗೂ ಮಮತಾರಿಗೆ ಬೆಂಬಲಿಸುವ ನಿರ್ಧಾರ ಕೈಗೊಂಡೆ ಎಂದು ಯಶ್ವಂತ್ ಸಿನ್ಹಾ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ತ್ಯಜಿಸಿದ್ದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಯಶ್ವಂತ್ ಸಿನ್ಹಾ ಇಂದು ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾದರು.

ಬಳಿಕ ಮಾತನಾಡಿದ ಅವರು, ಅಟಲ್​ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಬಿಜೆಪಿಯಲ್ಲಿ ಒಗ್ಗಟ್ಟು, ಒಮ್ಮತವಿತ್ತು. ಆದರೆ, ಇಂದಿನ ಬಿಜೆಪಿ ಸರ್ಕಾರವು ಒಡೆದು ಆಳುವ ಹಾಗೂ ಅತಿಕ್ರಮಣದ ನೀತಿ ಮೇಲೆ ನಂಬಿಕೆಯಿಟ್ಟಿದೆ. ಶಿರೋಮಣಿ ಅಕಾಲಿದಳ ಹಾಗೂ ಬಿಜು ಜನತಾ ದಳ (ಬಿಜೆಡಿ) ಪಕ್ಷವು ಇಂದು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿವೆ. ಬಿಜೆಪಿ ಜೊತೆಗೀಗ ಯಾರಿದ್ದಾರೆ? ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಮಾಜಿ ನಾಯಕ ಯಶ್ವಂತ್ ಸಿನ್ಹಾ ಟಿಎಂಸಿ ಸೇರ್ಪಡೆ

ದೇಶವು ಇಂದು ಅಭೂತಪೂರ್ವ ಪರಿಸ್ಥಿತಿ ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಶಕ್ತಿ ಅದರ ಸಂಸ್ಥೆಗಳ ಬಲದಲ್ಲಿದೆ. ಆದರೆ, ಇಂದು ನ್ಯಾಯಾಂಗ ಸೇರಿದಂತೆ ಎಲ್ಲಾ ಪ್ರಜಾಪ್ರಭುತ್ವದ ಸಂಸ್ಥೆಗಳು ದುರ್ಬಲಗೊಂಡಿವೆ ಎಂದು ಸಿನ್ಹಾ ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details