ಕರ್ನಾಟಕ

karnataka

ETV Bharat / bharat

ಆಂಧ್ರ ಯುವಕನ ಸಾಧನೆ.. ವಿಶ್ವದ ಯುವ ಸ್ಟಾರ್ಟ್‌ಅಪ್ ಲೀಡರ್‌ಗಳಲ್ಲಿ ಒಬ್ಬರು ಎಂದು ಕೊಂಡಾಡಿದ ಫೋರ್ಬ್ಸ್​

ವಿಶ್ವವಿಖ್ಯಾತ ಫೋರ್ಬ್ಸ್ ನಿಯತಕಾಲಿಕೆ ತನ್ನ ವೆಬ್‌ಸೈಟ್‌ನಲ್ಲಿ ಗುಂಟೂರಿನ ಸಾಯಿ ಪ್ರಜ್ವಲ್ ಕಾಟಂರಾಜು ಮತ್ತು ಅಮೆರಿಕದ ಬೋರ್ಡನ್ ಜೆಸ್ಟರ್ಸ್ ಅವರನ್ನು ವಿಶ್ವದ ಯುವ ಸ್ಟಾರ್ಟ್‌ಅಪ್ ಲೀಡರ್‌ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಿ ಲೇಖನವನ್ನು ಪ್ರಕಟಿಸಿದೆ.

By

Published : Aug 19, 2023, 1:27 PM IST

Updated : Aug 19, 2023, 2:11 PM IST

Article on Guntur youth in Forbe  Recognized as one of the worlds young startup  young startup leaders  ವಿಶ್ವವಿಖ್ಯಾತ ಫೋರ್ಬ್ಸ್ ನಿಯತಕಾಲಿಕೆ  ವೆಬ್‌ಸೈಟ್‌ನಲ್ಲಿ ಗುಂಟೂರಿನ ಸಾಯಿ ಪ್ರಜ್ವಲ್  ಅಮೆರಿಕದ ಬೋರ್ಡನ್ ಜೆಸ್ಟರ್ಸ್  ವಿಶ್ವದ ಯುವ ಸ್ಟಾರ್ಟ್‌ಅಪ್ ಲೀಡರ್‌  ಫೋರ್ಬ್ಸ್ ನಿಯತಕಾಲಿಕದ ವಿಶೇಷ ಪಟ್ಟಿಯಲ್ಲಿ ಸ್ಥಾನ  ಕಾಟಂರಾಜು ಆಟೋಮೋಟಿವ್ಸ್ ಎಂಬ ಕಂಪನಿಯ ಸಹ ಸಂಸ್ಥಾಪಕ  ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪರಿಣತಿ  ವಿಶ್ವದ ಯುವ ಸ್ಟಾರ್ಟ್‌ಅಪ್ ಲೀಡರ್‌ಗಳಲ್ಲಿ ಒಬ್ಬರು  ಲೀಡರ್‌ಗಳಲ್ಲಿ ಒಬ್ಬರು ಎಂದು ಕೊಂಡಾಡಿದ ಫೋರ್ಬ್ಸ್​ ಆಂಧ್ರ ಯುವಕನ ಸಾಧನೆ
ಆಂಧ್ರ ಯುವಕನ ಸಾಧನೆ

ಗುಂಟೂರು, ಆಂಧ್ರಪ್ರದೇಶ:ಜಿಲ್ಲೆಯ ನಿವಾಸಿ ಪ್ರಜ್ವಲ್ ಕಾಟಂರಾಜು ಎಂಬುವರು ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕದ ವಿಶೇಷ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಾಟಂರಾಜು ಕೆಎಲ್ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿ ಆಗಿದ್ದಾರೆ. ಫೋರ್ಬ್ಸ್ ನಿಯತಕಾಲಿಕವು 30 ವರ್ಷದೊಳಗಿನ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಿದ 30 ಜನರ ಲಿಸ್ಟ್​ನಲ್ಲಿ ಅವರನ್ನು ಸಹ ಸೇರಿಸಿದೆ. ಈ ಪಟ್ಟಿಯು ಸೃಜನಶೀಲ, ಮಹತ್ವಾಕಾಂಕ್ಷೆಯ ಮತ್ತು ಧೈರ್ಯಶಾಲಿ ಜನರನ್ನು ಪ್ರತಿನಿಧಿಸುತ್ತದೆ. ಇವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿರುವವರಾಗಿದ್ದಾರೆ.

ಕಾಟಂರಾಜು ಆಟೋಮೋಟಿವ್ಸ್ ಎಂಬ ಕಂಪನಿಯ ಸಹ ಸಂಸ್ಥಾಪಕರಾಗಿದ್ದಾರೆ. ಈ ಕಂಪನಿಯ ಪ್ರಧಾನ ಕಚೇರಿ ಅಮೆರಿಕದಲ್ಲಿದೆ. ಈ ಕಂಪನಿಯು ವಾಯು ಮತ್ತು ರಸ್ತೆ ಸಂಚಾರ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತದೆ. ಕೆಎಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, ಅವರು ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯಿಂದ ಹೆಚ್ಚಿನ ಅಧ್ಯಯನವನ್ನು ಮಾಡಿದರು. ಮೊದಲಿನಿಂದಲೂ ಅವರು ಸಿಗ್ನಲ್ ಪ್ರಕ್ರಿಯೆಯಲ್ಲಿ ಆಸಕ್ತಿ ಹೊಂದಿದ್ದರು. ಫೋರ್ಬ್ಸ್ ತನ್ನ ಪಟ್ಟಿಯಲ್ಲಿ ಪ್ರಜ್ವಲ್ ಕಾಟಂರಾಜು ಅವರ ಹೆಸರನ್ನು ಉಲ್ಲೇಖಿಸಿದೆ ಮತ್ತು ಕಾಟಂರಾಜು ಅವರು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದ್ದಾರೆ ಎಂದು ಬರೆದಿದ್ದಾರೆ.

ತಮ್ಮ ಜ್ಞಾನ ಮತ್ತು ಕಠಿಣ ಪರಿಶ್ರಮದ ಮೂಲಕ ವಿಶ್ವದ ಅತಿದೊಡ್ಡ ಟ್ರಾಫಿಕ್ ಸಮಸ್ಯೆಗೆ ಅವರು ವಿಶಿಷ್ಟ ಪರಿಹಾರವನ್ನು ಕಂಡುಕೊಂಡಿದ್ದಾರೆ. ಕಾಟಂರಾಜು ಮತ್ತು ಅವರ ಕಂಪನಿಯ ಇತರ ಇಬ್ಬರು ಸಹ-ಸಂಸ್ಥಾಪಕರಾದ ಜೋರ್ಡಾನ್ ಜಸ್ಟಸ್ ಮತ್ತು ಹ್ಯಾರಿಸ್ ಲುಮಿಸ್ ಅವರ ಹೆಸರುಗಳನ್ನು ಸಹ ಫೋರ್ಬ್ಸ್ ಉಲ್ಲೇಖಿಸಿದೆ.

ತಂತ್ರಜ್ಞಾನದ ಬಳಕೆಯ ಮೂಲಕ ದೇಶಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಸಂಚಾರ ದಟ್ಟಣೆ ಮತ್ತು ಸುರಕ್ಷತೆಯ ಅಪಾಯಗಳನ್ನು ಕಡಿಮೆ ಮಾಡಲು ಆಟೋಮೋಟಿವ್ ಕೆಲಸ ಮಾಡುತ್ತದೆ. ಕಂಪನಿಯು ಸ್ಥಳೀಯ ಆಡಳಿತ ಮತ್ತು ವಿಮಾನ ನಿಲ್ದಾಣಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಪ್ರಸ್ತುತ ಅಮೆರಿಕಾದ 12 ನಗರಗಳು ಮತ್ತು 1,000 ಫ್ಲೀಟ್ ಆಪರೇಟರ್‌ಗಳಿಗೆ ಸೇವೆ ಸಲ್ಲಿಸುತ್ತಿದೆ.

ಪ್ರಜ್ವಲ್​ ಯಾರು?:2016 ರಲ್ಲಿ ಕೆಎಲ್‌ಯುನಲ್ಲಿ ಬಿಟೆಕ್ ಮುಗಿಸಿದ ಸಾಯಿ ಪ್ರಜ್ವಲ್, 2017 ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಅವರು ಅಲ್ಲಿ ಬೋರ್ಡನ್ ಜೆಸ್ಟರ್ಸ್ ಜೊತೆಗೆ ಹೊಸ ತಂತ್ರಜ್ಞಾನದ ಅರಿವನ್ನು ಅಭಿವೃದ್ಧಿಪಡಿಸಿದರು. ಬಳಿಕ 2023 ರಲ್ಲಿ 'ಆಟೋಮೋಟಾಸ್' ಎಂಬ ಸ್ವಯಂಚಾಲಿತ ಕರ್ಬ್ ಮ್ಯಾನೇಜ್‌ಮೆಂಟ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದರು.

ದಟ್ಟಣೆಯನ್ನು ಪತ್ತೆಹಚ್ಚಲು ಮತ್ತು ಅಪಘಾತಗಳನ್ನು ತಡೆಗಟ್ಟಲು ಅಮೆರಿಕ ನಗರಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಬಳಸಲು ಇದನ್ನು ವಿನ್ಯಾಸಗೊಳಿಸಲಾಗಿತ್ತು. ಆ ಪ್ರದೇಶಗಳಲ್ಲಿ ವಿಶೇಷವಾಗಿ ಅಳವಡಿಸಲಾಗಿರುವ ಸ್ವಯಂಚಾಲಿತ ಕ್ಯಾಮೆರಾಗಳ ಸಹಾಯದಿಂದ ಟ್ರಾಫಿಕ್ ಸಮಸ್ಯೆ ಎಲ್ಲಿದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬಹುದಾಗಿತ್ತು. ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಮತ್ತು ಅಪಘಾತಗಳನ್ನು ತಪ್ಪಿಸಲು ಬಳಕೆದಾರರು ಇದನ್ನು ಬಳಸಬಹುದಾಗಿತ್ತು.

ಈ ವಿಧಾನವನ್ನು ಮೆಚ್ಚಿದ 'ಟೆಕ್ ಸ್ಟಾರ್ಸ್ ವೆಂಚರ್ಸ್' ಕಂಪನಿಯು ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ಹೆಚ್ಚಿನ ಜನರಿಗೆ ತಲುಪಿಸಲು 12 ಮಿಲಿಯನ್ ಡಾಲರ್‌ಗಳನ್ನು ನೀಡಲು ಮುಂದಾಗಿದೆ. ಇದರೊಂದಿಗೆ ಫೋರ್ಬ್ಸ್ ನಿಯತಕಾಲಿಕೆಯು ಸಾಯಿ ಪ್ರಜ್ವಲ್ ಕಾಟಂರಾಜು ಮತ್ತು ಬೌರ್ಡನ್ ಜೆಸ್ಟರ್ಸ್ ವಿಶ್ವದ ಯುವ ಸ್ಟಾರ್ಟ್‌ಅಪ್ ನಾಯಕರು ಎಂದು ಲೇಖನವನ್ನು ಪ್ರಕಟಿಸಿದೆ.

ಓದಿ:Forbes 2023: ಫೋರ್ಬ್ಸ್ ಮಹಿಳಾ ಧನಿಕರ ಪಟ್ಟಿಯಲ್ಲಿ ಭಾರತೀಯ ಸಂಜಾತ ನಾಲ್ವರಿಗೆ ಸ್ಥಾನ

Last Updated : Aug 19, 2023, 2:11 PM IST

ABOUT THE AUTHOR

...view details