ಆಂಧ್ರಪ್ರದೇಶ: ಕೋವಿಡ್ ಸೋಂಕು ತಗುಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ವೈದ್ಯರ ಚಿಕಿತ್ಸೆಗೆ ಸ್ಪಂದಿಸಲು ಆಂಧ್ರ ಸರ್ಕಾರ ಮುಂದಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದ ಎನ್. ಭಾಸ್ಕರ್ ರಾವ್ ದಂಪತಿ ಚಿಕಿತ್ಸೆ ಒಂದೂವರೆ ಕೋಟಿ ರೂಪಾಯಿಯನ್ನು ಸರ್ಕಾರ ಭರಿಸಲಿದೆ ಎಂದು ಸಿಎಂ ಜಗನ್ಮೋಹನ್ರೆಡ್ಡಿ ತಿಳಿಸಿದ್ದಾರೆ.
ಪ್ರಕಾಶಂ ಜಿಲ್ಲೆಯ ಪಿಎಚ್ಸಿ ಕರಮ್ಚೆಡುನಲ್ಲಿ ವೈದ್ಯರಾಗಿರುವ ಎನ್. ಭಾಸ್ಕರ್ ರಾವ್ ಮತ್ತು ಗುಂಟೂರು ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಅವರ ಪತ್ನಿ ಡಾ.ಭಾಗ್ಯಲಕ್ಷ್ಮಿ ಗೆ ಕೋವಿಡ್ ದೃಢಪಟ್ಟಿತ್ತು. ಇವರಿಬ್ಬರನ್ನು ಏಪ್ರಿಲ್ 30 ರಂದು ಗುಂಟೂರಿನ ಜಿಜಿಹೆಚ್ ಆಸ್ಪತ್ರೆಗೆ ದಾಖಲಿಸಲಾಯಿತು.
ಭಾಸ್ಕರ್ ರಾವ್ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರಿಂದ ಮೇ 3 ರಂದು ವಿಜಯವಾಡದ ಆಯುಷ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರೋಗ್ಯ ಮತ್ತಷ್ಟೂ ಬಿಗಡಾಯಿಸಿದಾಗ ಮೇ 9 ರಂದು ಸೋಮಾಜಿಗುಡದ ಯಶೋಧಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಮೇ 10 ರಂದು ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಗಚಿಬೌಲಿಯ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.