ಕರ್ನಾಟಕ

karnataka

ETV Bharat / bharat

ಮತಗಟ್ಟೆ ಸೆರೆ, ನಕಲಿ ಮತದಾನಕ್ಕೆ ಯತ್ನಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸುಪ್ರೀಂ ಸೂಚನೆ - ನಕಲಿ ಮತದಾನ

ಮತದಾನದ ವೇಳೆ ಬೂತ್‌ ಸೆರೆ ಹಿಡಿಯುವುದಾಗಲಿ, ನಕಲಿ ಮತದಾನಕ್ಕೆ ಪ್ರಯತ್ನಿಸುವುದು ಕಾನೂನು ಮತ್ತು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Any attempt of booth capturing, bogus voting should be dealt with iron hands: SC
ಮತಗಟ್ಟೆ ಸೆರೆ ಹಿಡಿಯುವ, ನಕಲಿ ಮದಾನಕ್ಕೆ ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು - ಸುಪ್ರೀಂ ಕೋರ್ಟ್

By

Published : Jul 23, 2021, 10:03 PM IST

ನವದೆಹಲಿ: ಮತಗಟ್ಟೆಯನ್ನು ಸೆರೆಹಿಡಿಯುವ ಅಥವಾ ನಕಲಿ ಮತದಾನದ ಯಾವುದೇ ಪ್ರಯತ್ನ ಕಾನೂನು ಮತ್ತು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಜಾರ್ಖಂಡ್‌ನ ಮತದಾನ ಕೇಂದ್ರದಲ್ಲಿ ಗಲಭೆ ಸಂಬಂಧ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯ ಮನವಿಯನ್ನು ವಜಾಗೊಳಿಸಿ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.

ತನ್ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಂ.ಆರ್ ಶಾ ನೇತೃತ್ವದ ದ್ವಿಸದಸ್ಯ ಪೀಠ, ಮತದಾನದ ಸ್ವಾತಂತ್ರ್ಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ರಹಸ್ಯ ಮತ ಚಲಾಯಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.

ಚುನಾವಣಾ ವ್ಯವಸ್ಥೆಯ ಮೂಲತತ್ವವು ಮತದಾರರಿಗೆ ತಮ್ಮ ಮುಕ್ತ ಆಯ್ಕೆಯನ್ನು ಚಲಾಯಿಸುವ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸಿಕೊಳ್ಳಬೇಕು. ಆದ್ದರಿಂದ, ಯಾವುದೇ ಪ್ರಯತ್ನ ಮತ್ತು ಮತಗಟ್ಟೆಯನ್ನು ಸೆರೆಹಿಡಿಯುವ ಅಥವಾ ನಕಲಿ ಮತದಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಏಕೆಂದರೆ ಅದು ಅಂತಿಮವಾಗಿ ಕಾನೂನು ಮತ್ತು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳ ಚುನಾವಣೆಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ನೇರ ಚುನಾವಣೆಗಳು ನಡೆಯುವ ಪ್ರಜಾಪ್ರಭುತ್ವಗಳಲ್ಲಿ ಮತದಾರನು ತನ್ನ ಮತವನ್ನು ಭಯವಿಲ್ಲದೆ ಚಲಾಯಿಸುತ್ತಾನೆ. ತನ್ನ ಮತವನ್ನು ಬಹಿರಂಗಪಡಿಸಿದರೆ ಆತ ಬಲಿಪಶುವಾಗುವುದನ್ನು ತಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಇದನ್ನೂ ಓದಿ: Covid ನಿರ್ಬಂಧ ಸಡಿಲಿಕೆ ವಿಚಾರ: ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

ಪ್ರಜಾಪ್ರಭುತ್ವ ಮತ್ತು ಮುಕ್ತ ಚುನಾವಣೆಗಳು ಸಂವಿಧಾನದ ಮೂಲ ರಚನೆಯ ಭಾಗವಾಗಿದೆ. ಚುನಾವಣೆಯು ಜನರು ಪ್ರತಿನಿಧಿಸುವ ಒಂದು ಕಾರ್ಯವಿಧಾನ. ಮುಕ್ತ ಮತ್ತು ನ್ಯಾಯಯುತ ಚುನಾವಣೆಯ ಹಕ್ಕನ್ನು ದುರ್ಬಲಗೊಳಿಸಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತ ನೋವುಂಟು ಮಾಡುವುದು) ಮತ್ತು 147 (ಗಲಭೆ) ಅಡಿಯಲ್ಲಿ ಶಿಕ್ಷೆಗೊಳಗಾದ ಲಕ್ಷ್ಮಣ್ ಸಿಂಗ್ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಉನ್ನತ ನ್ಯಾಯಾಲಯ ವಜಾಗೊಳಿಸಿತು. ಸಿಂಗ್‌ಗೆ ನೀಡಲಾದ ಆರು ತಿಂಗಳ ಜೈಲು ಶಿಕ್ಷೆಯ ವಿರುದ್ಧದ ಮೇಲ್ಮನವಿಯನ್ನು ರಾಜ್ಯವು ಆದ್ಯತೆ ನೀಡದ ಕಾರಣ, ಅದು ಅಲ್ಲಿಯೇ ಇದೆ ಎಂದು ಕೋರ್ಟ್‌ ಹೇಳಿದೆ.

ABOUT THE AUTHOR

...view details