ಕರ್ನಾಟಕ

karnataka

ETV Bharat / bharat

'ಮುಂದಿನ ಪೀಳಿಗೆಯ ಪ್ರತಿಭೆ': ಆನಂದ್ ಮಹೀಂದ್ರಾ ಹಂಚಿಕೊಂಡ ಈ ವಿಡಿಯೋ ನೋಡಿ - ಈಟಿವಿ ಭಾರತ ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಕಂಪನಿಯ ಅಧ್ಯಕ್ಷ​, ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ಹೊಸ ವಿಡಿಯೋ ಟ್ವೀಟ್‌ ಮಾಡಿ ಕುತೂಹಲ ಕೆರಳಿಸಿದ್ದಾರೆ.

Anand Mahindra Shares video
Anand Mahindra Shares video

By

Published : Aug 9, 2022, 3:53 PM IST

ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ದೇಶದ ಮುಂಚೂಣಿ ಉದ್ಯಮಿ ಆನಂದ್ ಮಹೀಂದ್ರಾ ಸದಭಿರುಚಿಯ ವಿಡಿಯೋದಗನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಹಂಚಿಕೊಂಡಿರುವ ಹೊಸ ವಿಡಿಯೋ ತುಣುಕೊಂದು ನೆಟ್ಟಿಗರ ಗಮನ ಸೆಳೆದಿದ್ದು, ವೈರಲ್​ ಆಗುತ್ತಿದೆ. ತಮ್ಮ ಟ್ವಿಟರ್ ಖಾತೆಯಲ್ಲಿ 'ಈತ ಮುಂದಿನ ಪೀಳಿಗೆಯ ಪ್ರತಿಭೆ' ಎಂದು ಶೀರ್ಷಿಕೆ ಕೊಟ್ಟು, ಚಿಕ್ಕ ಬಾಲಕನ ವಿಡಿಯೋ ಶೇರ್ ಮಾಡಿದ್ದಾರೆ. ಇದರ ಜೊತೆಗೆ ಈ ಪ್ರತಿಭೆಗೆ ಟ್ರ್ಯಾಕ್​​ನ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲೇನಿದೆ?:ಬಾಲಕನೋರ್ವ ರಸ್ತೆ ಮಧ್ಯ ಭಾಗದಲ್ಲಿ ಪಲ್ಟಿ ಹೊಡೆಯುತ್ತಾ ಮುಂದೆ ಸಾಗುತ್ತಿದ್ದಾನೆ. ತಮಿಳುನಾಡಿನ ತಿರುನೆಲ್ವೇಲಿ ಸಮೀಪದ ಹಳ್ಳಿಯೊಂದರಲ್ಲಿ ತೆಗೆದ ವಿಡಿಯೋ ಇದೆಂದು ಹೇಳಲಾಗುತ್ತಿದೆ. ಕಾಮನ್​​ವೆಲ್ತ್ ಗೇಮ್ಸ್​ನಲ್ಲಿ ಭಾರತದ ಅಥ್ಲೀಟ್ಸ್ ಅನೇಕ ಚಿನ್ನದ ಪದಕಗಳನ್ನು ಹೊತ್ತು ದೇಶಕ್ಕೆ ಮರಳಿದ್ದಾರೆ. ಆದರೆ, ಇದೀಗ ಮುಂದಿನ ಪೀಳಿಗೆಯ ಪ್ರತಿಭೆಗಳು ರೂಪುಗೊಳ್ಳುತ್ತಿವೆ. ಇವರಿಗೆ ನಮ್ಮ ಬೆಂಬಲ ಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಈ ಮರದ ಟ್ರೆಡ್​ಮಿಲ್​ಗೆ ಫಿದಾ ಆದ ಆನಂದ್​ ಮಹೀಂದ್ರಾ: ತಮಗೂ ಬೇಕು ಎಂದು ಮನವಿ

ಕಳೆದ ಕೆಲ ಗಂಟೆಗಳ ಹಿಂದೆ ಈ ವಿಡಿಯೋ ಆನಂದ್ ಮಹೀಂದ್ರಾ ಅವರ ಟ್ವಿಟರ್ ಖಾತೆಯಲ್ಲಿ ಶೇರ್ ಆಗಿದ್ದು, ಈಗಾಗಲೇ ಲಕ್ಷಾಂತರ ವೀಕ್ಷಣೆ ಸಿಕ್ಕಿದೆ. ಸಾವಿರಾರು ಜನರು ಲೈಕ್ಸ್‌ ನೀಡಿ ಮೆಚ್ಚಿಕೊಂಡಿದ್ದಾರೆ. ಅನೇಕರು ತರಹೇವಾರಿ ಕಮೆಂಟ್​ ಮಾಡಿದ್ದಾರೆ.

ABOUT THE AUTHOR

...view details