ಕರ್ನಾಟಕ

karnataka

By

Published : Oct 27, 2022, 11:54 AM IST

ETV Bharat / bharat

6000 ಕೋಟಿ ಮೊತ್ತದ ಯೋಜನೆಗಳಿಗೆ ಅಮಿತ್​ ಶಾ ಶಂಕುಸ್ಥಾಪನೆ

ಹರಿಯಾಣ ಆರ್ಬಿಟಲ್ ರೈಲ್ ಕಾರಿಡಾರ್ ಯೋಜನೆಯಡಿ, ದೆಹಲಿಯನ್ನು ಬೈಪಾಸ್ ಮಾಡುವ ಪಲ್ವಾಲ್‌ನಿಂದ ಸೋನಿಪತ್‌ಗೆ ಸುಮಾರು 121 ಕಿ.ಮೀ ಉದ್ದದ ಡಬಲ್ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತದೆ. ದೆಹಲಿಯಿಂದ ಪ್ರಾರಂಭವಾಗುವ ಮತ್ತು ಹರಿಯಾಣ ಮೂಲಕ ಹಾದುಹೋಗುವ ಎಲ್ಲಾ ರೈಲು ಮಾರ್ಗಗಳು ಈ ಯೋಜನೆಯೊಂದಿಗೆ ಸಂಪರ್ಕಿಸಲ್ಪಡುತ್ತವೆ. ಇದು ದೆಹಲಿಯ ಟ್ರಾಫಿಕ್ ಲೋಡ್ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹರಿಯಾಣದಲ್ಲಿ ಗೃಹಸಚಿವ ಅಮಿತ್ ಶಾ: 6000 ಕೋಟಿ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ
Amit Shah to visit Haryana today, to inaugurate, lay foundation of projects worth Rs 6,660 cr

ಫರೀದಾಬಾದ್ (ಹರಿಯಾಣ):ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹರಿಯಾಣಕ್ಕೆ ಭೇಟಿ ನೀಡುತ್ತಿದ್ದು, ಫರೀದಾಬಾದ್‌ನಲ್ಲಿ 6,660 ಕೋಟಿ ರೂಪಾಯಿ ಮೌತ್ತದ ನಾಲ್ಕು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಈ ಯೋಜನೆಗಳಲ್ಲಿ ಹರಿಯಾಣ ಆರ್ಬಿಟಲ್ ರೈಲ್ ಕಾರಿಡಾರ್ ಯೋಜನೆ ಸೇರಿದಂತೆ ಸುಮಾರು 5,600 ಕೋಟಿ ರೂ. ಮೊತ್ತದ ಯೋಜನೆಗಳು ಸೇರಿವೆ. ಬಾಡಿ (ಗನೌರ್) ಜಿಲ್ಲೆಯ ಸೋನೆಪತ್‌ನಲ್ಲಿ ಸುಮಾರು 590 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರೈಲು ಕೋಚ್ ನವೀಕರಣ ಕಾರ್ಖಾನೆ ಉದ್ಘಾಟನೆಗೊಳ್ಳಲಿದ್ದು, ಸುಮಾರು 315 ಕೋಟಿ ರೂಪಾಯಿ ವೆಚ್ಚದಲ್ಲಿ ರೋಹ್ಟಕ್​ನಲ್ಲಿ ನಿರ್ಮಿಸಲಾದ ದೇಶದ ಮೊದಲ ಉದ್ದದ ಎಲಿವೇಟೆಡ್ ರೈಲು ಹಳಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.

ಹರಿಯಾಣ ಆರ್ಬಿಟಲ್ ರೈಲ್ ಕಾರಿಡಾರ್ ಯೋಜನೆಯಡಿ, ದೆಹಲಿಯನ್ನು ಬೈಪಾಸ್ ಮಾಡುವ ಪಲ್ವಾಲ್‌ನಿಂದ ಸೋನಿಪತ್‌ಗೆ ಸುಮಾರು 121 ಕಿ.ಮೀ ಉದ್ದದ ಡಬಲ್ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತದೆ. ದೆಹಲಿಯಿಂದ ಪ್ರಾರಂಭವಾಗುವ ಮತ್ತು ಹರಿಯಾಣದ ಮೂಲಕ ಹಾದುಹೋಗುವ ಎಲ್ಲಾ ರೈಲು ಮಾರ್ಗಗಳು ಈ ಯೋಜನೆಯೊಂದಿಗೆ ಸಂಪರ್ಕಿಸಲ್ಪಡುತ್ತವೆ. ಇದು ದೆಹಲಿಯ ಟ್ರಾಫಿಕ್ ಲೋಡ್ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುಗ್ರಾಮದಿಂದ ಚಂಡೀಗಢಕ್ಕೆ ಶತಾಬ್ದಿಯಂಥ ರೈಲುಗಳನ್ನು ಹೊಂದಿರುವ ಈ ರೈಲು ಕಾರಿಡಾರ್ ಪಕ್ಕದ ಪ್ರದೇಶಗಳ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೊಸ ಉದ್ಯಮ ಮತ್ತು ಲಾಜಿಸ್ಟಿಕ್ಸ್ ಕೇಂದ್ರಗಳು ಸ್ಥಾಪನೆಯಾಗುತ್ತವೆ ಮತ್ತು ಪಂಚಗ್ರಾಮ್ ಯೋಜನೆಯ ಅನುಷ್ಠಾನಕ್ಕೆ ಗಣನೀಯ ಕೊಡುಗೆ ನೀಡಲಿವೆ. ರೋಹ್ಟಕ್‌ನಲ್ಲಿ 5 ಕಿಮೀ ಉದ್ದದ ಎಲಿವೇಟೆಡ್ ಟ್ರ್ಯಾಕ್ ಯೋಜನೆಯು ರೋಹ್ಟಕ್ ನಗರದಲ್ಲಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲಿದೆ ಮತ್ತು ನಗರದಲ್ಲಿನ ನಾಲ್ಕು ಜನಜಂಗುಳಿಯ ರೈಲ್ವೆ ಕ್ರಾಸಿಂಗ್‌ ಮೇಲೆ ಇದು ಹಾದುಹೋಗುತ್ತದೆ.

ರೋಹ್ಟಕ್‌ನಲ್ಲಿ ನಿರ್ಮಾಣವಾಗಲಿರುವ ದೇಶದ ಮೊದಲ ಉದ್ದದ ರೈಲ್ವೇ ಎಲಿವೇಟೆಡ್ ಟ್ರ್ಯಾಕ್ ಇದಾಗಿದೆ. ರೋಹ್ಟಕ್ ನಂತರ ಜಿಂದ್, ಕುರುಕ್ಷೇತ್ರ ಮತ್ತು ಕೈತಾಲ್‌ನಲ್ಲಿ ಇದೇ ರೀತಿಯ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗುವುದು.

ಗೃಹ ಸಚಿವರ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಸಿಸಿಟಿವಿ ಹಾಗೂ ಡ್ರೋನ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗುರುಗ್ರಾಮದಿಂದ ಫರಿದಾಬಾದ್‌ನ ಮಂಗರ್-ಪಾಲಿ-ಮಾರ್ಗ್‌ಗೆ ಭಾರೀ ವಾಹನಗಳ ಪ್ರವೇಶವನ್ನು ಈ ದಿನದ ಮಟ್ಟಿಗೆ ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸಾರಿಗೆ ಎಂದಿನಂತೆ ಕಾರ್ಯನಿರ್ವಹಿಸಲಿದೆ.

ಗೃಹ ಸಚಿವ ಅಮಿತ್ ಶಾ ಅವರು ದೇಶದ ಆರ್ಥಿಕ ಭದ್ರತೆಗೆ ಸಂಬಂಧಿಸಿದಂತೆ ಅಕ್ಟೋಬರ್ 28 ರಂದು ಸೂರಜ್‌ಕುಂಡ್‌ನಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಚಿಂತನ ಮಂಥನ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಇಲ್ಲಿ ರಾಜಕೀಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಮನೋಹರ್ ಲಾಲ್, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಬಿಪ್ಲಬ್ ದೇವ್ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಆರ್ಟಿಕಲ್​ 370 ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರ ಸುರಕ್ಷಿತ.. ಅಮಿತ್​ ಶಾ ಬಣ್ಣನೆ

ABOUT THE AUTHOR

...view details