ಕರ್ನಾಟಕ

karnataka

ETV Bharat / bharat

ಕಾಬೂಲ್​ನಿಂದ ದೆಹಲಿಗೆ ಬಂದ129 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ

ಕೆನಡಾ ಮತ್ತು ಸ್ವೀಡನ್ ಕೂಡ ತಮ್ಮ ಸಿಬ್ಬಂದಿಯನ್ನು ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯಿಂದ ಹಿಂತೆಗೆದುಕೊಳ್ಳಲು ಸಜ್ಜಾಗಿವೆ. ಸೋಮವಾರದ ಬಳಿಕ ಅಫ್ಘಾನ್​ನ ಕಾಬೂಲ್​ನಲ್ಲಿರುವ ಎಲ್ಲಾ ರಾಯಭಾರ ಸಿಬ್ಬಂದಿಯನ್ನು ಸ್ವೀಡನ್​​ಗೆ ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ..

ಕಾಬೂಲ್​
ಕಾಬೂಲ್​

By

Published : Aug 15, 2021, 10:43 PM IST

ನವದೆಹಲಿ: ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಬಿಗಿ ಹಿಡಿತ ಸಾಧಿಸಿದ್ದು, ಕಾಬೂಲ್‌ ನಗರವನ್ನು ಪ್ರವೇಶಿಸಿದ್ದಾರೆ. ಇದರ ಬೆನ್ನಲ್ಲೇ 129 ಪ್ರಯಾಣಿಕರನ್ನು ಹೊತ್ತ AI244 ಹೆಸರಿನ ಏರ್ ಇಂಡಿಯಾ ವಿಮಾನ ಕಾಬೂಲ್​ನಿಂದ ದೆಹಲಿಗೆ ಬಂದಿಳಿದಿದೆ.

ಇದಲ್ಲದೆ, ಕೆನಡಾ ಮತ್ತು ಸ್ವೀಡನ್ ಕೂಡ ತಮ್ಮ ಸಿಬ್ಬಂದಿಯನ್ನು ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯಿಂದ ಹಿಂತೆಗೆದುಕೊಳ್ಳಲು ಸಜ್ಜಾಗಿವೆ. ಸೋಮವಾರದ ಬಳಿಕ ಅಫ್ಘಾನ್​ನ ಕಾಬೂಲ್​ನಲ್ಲಿರುವ ಎಲ್ಲಾ ರಾಯಭಾರ ಸಿಬ್ಬಂದಿಯನ್ನು ಸ್ವೀಡನ್​​ಗೆ ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:ಅಘ್ಘಾನಿಸ್ತಾನ ತಾಲಿಬಾನ್ ವಶ; ದೇಶ ತೊರೆದು ತಜಕಿಸ್ತಾನಕ್ಕೆ ತೆರಳಿದ ಅಶ್ರಫ್ ಘನಿ

ಅಫ್ಘಾನಿಸ್ತಾನದಲ್ಲಿ ಅಸ್ತವ್ಯಸ್ತವಾಗಿರುವ ಮತ್ತು ಭದ್ರತೆಯ ಪರಿಸ್ಥಿತಿ ಅಸ್ಥಿರವಾಗುತ್ತಿರುವಾಗ, ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ಅಧಿಕಾರ ತ್ಯಜಿಸಿದ್ದಾರೆ. ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್ ಸಂಧಾನಕಾರರ ನಡುವೆ ಮಾತುಕತೆಯ ನಂತರ ತಾಲಿಬಾನ್ ಮಧ್ಯಂತರ ಸರ್ಕಾರವನ್ನು ರಚಿಸಿದೆ. ಇತ್ತ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದು ನೆರೆಯ ತಜಕಿಸ್ತಾನಕ್ಕೆ ತೆರಳಿದ್ದಾರೆ.

For All Latest Updates

ABOUT THE AUTHOR

...view details