ನವದೆಹಲಿ :ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ-ಎಲ್ 1 ಯೋಜನೆ ಕುರಿತು ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ (ಇಸ್ರೋ) ಮಾಹಿತಿ ನೀಡಿದ್ದು, ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಸುಮಾರು 16 ಸೆಕೆಂಡುಗಳ ಪಥ ಸರಿಪಡಿಸುವಿಕೆ ಕಾರ್ಯ (TCM - Trajectory Correction Maneuvre) ಯಶಸ್ವಿಯಾಗಿ ನೆರವೇರಿದೆ ಎಂದು ಹೇಳಿದೆ.
ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದ್ದು, ನಿರಂತರವಾಗಿ ಸೂರ್ಯನ ಕಡೆಗೆ ಚಲಿಸುತ್ತಿದೆ. ಇಂದು (ಅಕ್ಟೋಬರ್ 6 ರಂದು) ನೌಕೆಯ ಪಥ ಸರಿಪಡಿಸುವಿಕೆ ಪ್ರಕ್ರಿಯೆ ಮಾಡಲಾಯಿತು. ಬಾಹ್ಯಾಕಾಶ ನೌಕೆಯು L1 ಸುತ್ತ ಹಾಲೋ ಕಕ್ಷೆಯ ಅಳವಡಿಕೆಯ ಕಡೆಗೆ ಅದರ ಉದ್ದೇಶಿತ ಮಾರ್ಗದಲ್ಲಿದೆ ಎಂದು TCM ಖಚಿತಪಡಿಸುತ್ತಿದೆ. ಆದಿತ್ಯ-L1 ಪ್ರಗತಿಯಲ್ಲಿದೆ, ಮ್ಯಾಗ್ನೆಟೋಮೀಟರ್ ಅನ್ನು ಕೆಲವೇ ದಿನಗಳಲ್ಲಿ ಮರುಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದೆ.
ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ ಮಿಷನ್ ಆದಿತ್ಯ-ಎಲ್ 1 ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಎಲ್ 1 ಪಾಯಿಂಟ್ ಅನ್ನು ಸುತ್ತುತ್ತದೆ. ಬಾಹ್ಯಾಕಾಶ ನೌಕೆ ಇದುವರೆಗೆ ಭೂಮಿಯಿಂದ 10 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸಿದೆ. ನೌಕೆಯು ಈಗ ಭೂಮಿಯ ಪ್ರಭಾವದ ವಲಯದಿಂದ ಹೊರಬಂದಿದೆ. ಸೆಪ್ಟೆಂಬರ್ 2 ರಂದು ಯಶಸ್ವಿ ಉಡಾವಣೆಯಾದ ನಂತರ ಆದಿತ್ಯ L 1 ಪ್ರಸ್ತುತ ಭೂಮಿಯ ಕಕ್ಷೆಯನ್ನು ತೊರೆದು L 1 ಪಾಯಿಂಟ್‌ನತ್ತ ವೇಗವಾಗಿ ಚಲಿಸುತ್ತಿದೆ.
ಇದನ್ನೂ ಓದಿ :ಇಸ್ರೋ ಪ್ರತಿದಿನ 100ಕ್ಕೂ ಹೆಚ್ಚು ಸೈಬರ್ ದಾಳಿ ಎದುರಿಸುತ್ತಿದೆ: ಎಸ್.ಸೋಮನಾಥ್