ಕಲ್ಲಂಬಲಮ್ (ಕೇರಳ): ಮೊಬೈಲ್ ಬಳಕೆಯ ಚಟವು ಮಕ್ಕಳನ್ನು ಎಂಥಾ ನಿರ್ಧಾರಕ್ಕೆ ದೂಡುತ್ತದೆ ಎಂಬುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮೊಬೈಲ್ನಲ್ಲಿ ವಿಡಿಯೋ ನೋಡುವ ವ್ಯಸನಿಯಾಗಿದ್ದೇನೆ. ಇದರಿಂದ ನನಗೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬರುತ್ತಿವೆ ಎಂದು ನೊಂದು 16 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೇರಳದ ಕಲ್ಲಂಬಲಮ್‌ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಸಾವಿಗೆ ಶರಣಾಗುವ ಮುನ್ನ ಬಾಲಕಿಯ ಬರೆದಿಟ್ಟ ಡೆತ್ನೋಟ್ನಲ್ಲಿ ಆತಂಕಕಾರಿ ಅಂಶಗಳನ್ನು ಉಲ್ಲೇಖಿಸಿದ್ದಾಳೆ. ತನಗೆ ಸ್ನೇಹಿತರು ಇರಲಿಲ್ಲ ಎಂದು ಬಾಲಕಿ ಹೇಳಿಕೊಂಡಿದ್ದಾಳೆ.
10ನೇ ತರಗತಿವರೆಗೆ ಬಾಲಕಿ ಉತ್ತಮ ವಿದ್ಯಾರ್ಥಿಯಾಗಿದ್ದಳು. 10ನೇ ತರಗತಿಯ ನಂತರ ಆಕೆ ತನ್ನ ತಾಯಿಯ ಮೊಬೈಲ್ ಬಳಸಲು ಪ್ರಾರಂಭಿಸಿದ್ದಳು. ಮೊಬೈಲ್ನಲ್ಲಿ ಕೊರಿಯನ್ ಬ್ಯಾಂಡ್‌ಗಳ ಯೂಟ್ಯೂಬ್ ವಿಡಿಯೋಗಳಿಗೆ ವ್ಯಸನಿಯಾಗಿದ್ದಳು. ಆಕೆಗೆ ಬೇರೆ ಯಾವುದೇ ಚಟಗಳಲು ಇರಲಿಲ್ಲ ಎಂಬುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಓದಲು ಬಳಲುಸುತ್ತಿದ್ದ ಕೋಣೆಯೊಳಗೆ ಹೋಗಿದ್ದ ಬಾಲಕಿ ಸುಮಾರು ಹೊತ್ತು ಕಳೆದರೂ ಹೊರ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡು ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ನಂಬಿಸಿ ಕರೆದೊಯ್ದು ಕತ್ತು ಸೀಳಿ 9ರ ಬಾಲೆಯ ಕೊಲೆ: 17 ವರ್ಷದ ಬಾಲಕನ ಸೆರೆ