ಚೆನ್ನೈ (ತಮಿಳುನಾಡು):ಶುಕ್ರವಾರ(ಇಂದು) ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಜಯಚಂದ್ರ ಅವರು ನಟಿ ಜಯಪ್ರದಾ ಅವರ ಪ್ರಕರಣಕ್ಕೆ ಸಂಬಂಧಿಸಿ ಇಎಸ್‌ಐ(ESI) ಕಂಪನಿಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ. ಜೊತೆಗೆ ನಟಿ ಜಯಪ್ರದಾ ಅವರ ಮೇಲ್ಮನವಿ ವಿಚಾರಣೆಯನ್ನು 18ಕ್ಕೆ ಮುಂದೂಡಲಾಗಿದೆ.
ಏನಿದು ಪ್ರಕರಣ?:ಜಯಪ್ರದಾ ಅವರು ಚೆನ್ನೈನ ರಾಯಪೇಟಾದಲ್ಲಿ ಚಿತ್ರಮಂದಿರ ಹೊಂದಿದ್ದಾರೆ. ಚೆನ್ನೈನ ರಾಮ್ ಕುಮಾರ್ ಅಣ್ಣಾ ರಸ್ತೆಯಲ್ಲಿ ರಾಜಬಾಬು ಜತೆ ಸೇರಿ ಚಿತ್ರಮಂದಿರ ನಡೆಸುತ್ತಿದ್ದರು. ಆಗ 1991ರ ನವೆಂಬರ್‌ನಿಂದ 2002 ರವರೆಗೆ 8 ಲಕ್ಷದ 17 ಸಾವಿರ ರೂ., 2002ರಿಂದ 2005 ರವರೆಗೆ 1 ಲಕ್ಷದ 58 ಸಾವಿರ ರೂ., 2003ರಿಂದ 1 ಲಕ್ಷದ 58 ಸಾವಿರ ರೂ.ಗಳನ್ನು ಅಲ್ಲಿ ಕೆಲಸ ಮಾಡಿದ ಕಾರ್ಮಿಕರಿಂದ ವಸೂಲಿ ಮಾಡಿದ ಇಎಸ್‌ಐ ಹಣ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಇಎಸ್‌ಐ ಕಂಪನಿ ಪರವಾಗಿ ಚೆನ್ನೈ ಎಗ್ಮೋರ್ ನ್ಯಾಯಾಲಯದಲ್ಲಿ 5 ಪ್ರಕರಣಗಳು ನಟಿ ವಿರುದ್ಧ ದಾಖಲಾಗಿದ್ದವು. ಈ ಪ್ರಕರಣದ ವಿಚಾರಣೆ ವೇಳೆ ಜಯಪ್ರದಾ ಕಾರ್ಮಿಕರು ವಿಮೆ ಹಣವನ್ನು ಹಿಂದಿರುಗಿಸುತ್ತಿದ್ದಾರೆ ಎಂದಿದ್ದರು. ಆದರೆ, ಇಎಸ್‌ಐ ಹಣ ಪಾವತಿಯಾಗದ ಕಾರಣ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಇಎಸ್‌ಐ ಕಂಪನಿ ತಿಳಿಸಿತ್ತು.