ಕರ್ನಾಟಕ

karnataka

ETV Bharat / bharat

ಜನರ ಮನೆ ಬಾಗಿಲಿಗೆ ಪಡಿತರ ಪೂರೈಕೆ; ಉಪ ರಾಜ್ಯಪಾಲರಿಗೆ ಮತ್ತೆ ಕಡತ ಕಳುಹಿಸಿದ ಕೇಜ್ರಿವಾಲ್‌

ದೆಹಲಿ ಜನರ ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡುವ ಯೋಜನೆಗೆ ಅನುಮತಿ ನೀಡಬೇಕೆಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ಮತ್ತೊಮ್ಮೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕಡತವನ್ನು ಕಳುಹಿಸಿದ್ದಾರೆ.

AAP govt makes fresh bid to get L-G's nod for doorstep delivery of ration scheme
ದೆಹಲಿ ಜನರ ಮನೆ ಬಾಗಿಲಿಗೆ ಪಡಿತರ ಪೂರೈಕೆ; ಎಲ್‌-ಜಿಗೆ ಮತ್ತೆ ಕಡತ ಕಳುಹಿಸಿದ ಸಿಎಂ ಕೇಜ್ರಿವಾಲ್‌

By

Published : Jun 17, 2021, 6:10 PM IST

ದೆಹಲಿ:ರಾಷ್ಟ್ರ ರಾಜಧಾನಿಯ ಜನರ ಮನೆ ಬಾಗಿಲಿಗೆ ಪಡಿತರ ವಿತರಣೆ ಮಹತ್ವಕಾಂಕ್ಷೆಯ ಯೋಜನೆಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅನುಮತಿ ನೀಡಿರಲಿಲ್ಲ. ಇದೀಗ ಮತ್ತೆ ತನ್ನ ಪ್ರಯತ್ನವನ್ನು ಮುಂದುವರಿಸಿರುವ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸರ್ಕಾರ, ಯೋಜನೆಗೆ ಅನುಮೋದನೆ ನೀಡುವಂತೆ ಮತ್ತೆ ಲೆಫ್ಟಿನೆಂಟ್​ ಗವರ್ನರ್​ಗೆ ಕಡತ ಕಳುಹಿಸಿದೆ.

ಜೂನ್‌ ಆರಂಭದಲ್ಲೇ ಅರವಿಂದ್ ಕೇಜ್ರಿವಾಲ್ ಸರ್ಕಾರವು ನೂತನ ಯೋಜನೆ ಜಾರಿಗೆ ನಿರ್ಧರಿಸಿ ಎಲ್-ಜಿ ಅನಿಲ್‌ ಬೈಜಾಲ್‌ ಅವರ ಅನುಮತಿ ಕೋರಿತ್ತು. ಆದರೆ ಇದನ್ನು ಎಲ್‌-ಜಿ ತಿರಸ್ಕರಿಸಿದ್ದರು. ಸದ್ಯ ಕೇಂದ್ರದ ಅನುಮೋದನೆ ಕೋರಿಲ್ಲ ಮತ್ತು ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮತ್ತೆ ಎಲ್‌-ಜಿಗೆ ಫೈಲ್ ಕಳುಹಿಸಿದ್ದಾರೆ ಮತ್ತು ಇದು ಕಾನೂನಿನ ಪ್ರಕಾರವಾಗಿದೆ ಮತ್ತು ಈ ಹಿಂದೆ ಕೇಂದ್ರವು ಎತ್ತಿದ ಆಕ್ಷೇಪಣೆಗಳನ್ನು ಪರಿಹರಿಸಲಾಗಿದೆ ಎಂದು ಫೈಲ್‌ನಲ್ಲಿ ವಿವರವಾಗಿ ತಿಳಿಸಿದ್ದಾರೆ. ಕೇಂದ್ರದ ನಿರ್ದೇಶನಗಳನ್ನು ಅನುಸರಿಸಲಾಗಿದೆ ಎಂದು ಕೇಜ್ರಿವಾಲ್ ಒತ್ತಿ ಹೇಳಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಯೋಜನೆಯನ್ನು ನಿಲ್ಲಿಸುವುದು ತಪ್ಪು ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಸೋನಿಯಾ, ರಾಹುಲ್‌ ಗಾಂಧಿ ಲಸಿಕೆ ತೆಗೆದುಕೊಂಡಿದ್ದಾರಾ..?

ಜೂನ್‌ನಲ್ಲಿ, ಬೈಜಲ್ ಈ ಯೋಜನೆಯನ್ನು ಮರುಪರಿಶೀಲಿಸುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದ್ದರು. ಎನ್‌ಎಫ್‌ಎಸ್‌ಎಯ ಸೆಕ್ಷನ್ 12 (2) (ಎಚ್) ಪ್ರಕಾರ ಕೇಂದ್ರದ ಪೂರ್ವಾನುಮತಿ ಕಡ್ಡಾಯವಾಗಿ ಅಗತ್ಯವಾಗಿರುತ್ತದೆ. ಲೆಫ್ಟಿನೆಂಟ್​ ಗವರ್ನರ್​ ವಾದವನ್ನು ಸರ್ಕಾರ ತಿರಸ್ಕರಿಸಿದೆ, ಇದನ್ನು ಕೇಜ್ರಿವಾಲ್ ಅವರು ಇತ್ತೀಚಿಗೆ ಪುನರುಚ್ಚರಿಸಿದ್ದರು.

ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಉಲ್ಲೇಖಿಸುವಂತೆ ಒತ್ತಾಯಿಸುವುದು ಸರಿಯಲ್ಲ. ಕೇಂದ್ರದ ಅನುಮೋದನೆ ಕಡ್ಡಾಯ ಅಥವಾ ಅಗತ್ಯವಿಲ್ಲ ಎಂದು ಸಿಎಂ ಕೇಜ್ರಿವಾಲ್‌ ಹೇಳಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡ್ಡಿಪಡಿಸುವ ಬದಲು ದೆಹಲಿ ಸರ್ಕಾರ, ಉದ್ದೇಶಿತ ಯೋಜನೆಗೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ಅಧಿಸೂಚಿತ ದರದಲ್ಲಿ ಖರೀದಿಸಲು ಮತ್ತು ಅದನ್ನು ಪ್ರಾರಂಭಿಸಲು ಮುಕ್ತವಾಗಿದೆ ಎಂದು ಕೇಂದ್ರವು ಹೇಳಿದೆ. ಜೊತೆಗೆ ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರಿಗೆ ಪತ್ರ ಬರೆದಿದೆ.

ಇದನ್ನೂ ಓದಿ: ಲಸಿಕೆ ಪಡೆದವರ ದೇಹಕ್ಕೆ ಲೋಹ ಅಂಟಿಕೊಳ್ಳೋದೇಕೆ..? ರಹಸ್ಯ ಬಿಚ್ಚಿಟ್ಟ ಮಂಗಳೂರಿನ ಪ್ರೊಫೆಸರ್​

ಎನ್‌ಎಫ್‌ಎಸ್‌ಎ ಅಡಿಯಲ್ಲಿ ಹೆಚ್ಚು ಸಬ್ಸಿಡಿ ಹೊಂದಿರುವ ಆಹಾರ ಧಾನ್ಯಗಳನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಇದೇ ವಿಚಾರವಾಗಿ ಸದ್ಯ ಕೇಂದ್ರ, ದೆಹಲಿ ಸರ್ಕಾರ ಹಾಗೂ ಎಲ್‌ಜಿ ಅನಿಲ್‌ ಬೈಜಾಲ್‌ ಅವರ ನಡುವಿನ ಸಮರಕ್ಕೆ ಕಾರಣವಾಗಿದೆ.

ABOUT THE AUTHOR

...view details