ಕರ್ನಾಟಕ

karnataka

ಕುರಿ ಕಾಯುವ ಯುವಕ 6ನೇ ಪ್ರಯತ್ನದಲ್ಲಿ IAS ಅಧಿಕಾರಿಯಾದ ಯಶೋಗಾಥೆ!

By

Published : Apr 8, 2022, 7:58 PM IST

Updated : Apr 8, 2022, 8:34 PM IST

2018 ರ ಬ್ಯಾಚ್​ನ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಉತ್ತರಪ್ರದೇಶ ಮೂಲದ ರಾಮ್ ಪ್ರಕಾಶ್ ಅವರು ತಮ್ಮ ಬಾಲ್ಯದ ದಿನಗಳ ಬಗ್ಗೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕುರಿ ಕಾಯುತ್ತಾ ತಾವು ಐಎಎಎಸ್​ ಹುದ್ದೆ ಪಡೆದ ಬಗ್ಗೆ ಹೇಳಿದ್ದು, ಎಲ್ಲೆಡೆ ವೈರಲ್​ ಆಗಿದೆ.

ias
ಐಎಎಸ್

ಮಿರ್ಜಾಪುರ(ಉತ್ತರಪ್ರದೇಶ):ವಿದ್ಯೆ ಯಾರಪ್ಪನ ಸ್ವತ್ತಲ್ಲ. ಅದು ಶ್ರೀಮಂತರಾದರೂ ಸರಿ, ಬಡವರಾದರೂ ಸರಿ. ಎಲ್ಲರಿಗೂ ಒಂದೇ. ವಿದ್ಯೆ ಒಲಿಯಬೇಕಾದರೆ ಮಾಡಬೇಕಾದ್ದೊಂದೇ. ಅದುವೇ ಕಠಿಣ ಪರಿಶ್ರಮ. ಹೀಗೆ ಹಗಲಿರುಳು ಶ್ರಮಿಸಿ ಐಎಎಸ್​ ಅಧಿಕಾರಿಯಾಗಿದ್ದಾರೆ ಉತ್ತರಪ್ರದೇಶ ಕುರಿ ಕಾಯುವ ಯುವಕ!.

ಆ ಅಧಿಕಾರಿಯ ಹೆಸರು ರಾಮ್​ ಪ್ರಕಾಶ್. ರಾಜಸ್ತಾನದ ಪಾಲಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾರೆ. ಮೂಲತಃ ಉತ್ತರಪ್ರದೇಶ ರಾಮ್​ ಪ್ರಕಾಶ್​ 6 ನೇ ಪ್ರಯತ್ನದಲ್ಲಿ ಐಎಎಸ್​ ಪರೀಕ್ಷೆ ಪಾಸಾಗಿದ್ದಾರೆ. ತಮ್ಮ ಬಾಲ್ಯ ಮತ್ತು ಶಿಕ್ಷಣದ ಬಗ್ಗೆ ಬಗ್ಗೆ ಅವರು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್​ ಆಗಿದೆ.

ರಾಮ್​ ಪ್ರಕಾಶ್​ ಅವರು ಶಿಕ್ಷಣದ ದಿನಗಳಲ್ಲಿ ಕುಟುಂಬಸ್ಥರು ಸಾಕಿದ ಕುರಿಗಳನ್ನು ಹಳ್ಳಿಯ ಹೊರವಲಯದಲ್ಲಿ ಮೇಯಿಸಲು ಹೋಗುತ್ತಿದ್ದರಂತೆ. ಇದರ ಜೊತೆಜೊತೆಗೇ ಶಿಕ್ಷಣವನ್ನು ಮುಂದುವರಿಸಿದ್ದರಂತೆ. ಕುರಿ ಕಾಯುವುದು ರಾಮ್​ ಪ್ರಕಾಶ್​ರ ದೈನಂದಿನ ಚಟುವಟಿಕೆಯಲ್ಲಿ ಒಂದಾಗಿತ್ತಂತೆ.

ಮಿರ್ಜಾಪುರದ ಜಮುವಾ ಬಜಾರ್​ನ ನಿವಾಸಿಯಾದ ರಾಮ್​ ಪ್ರಕಾಶ್​ 2018ರಲ್ಲಿ 6ನೇ ಪ್ರಯತ್ನದಲ್ಲಿ ತಾವು ಐಎಎಸ್​ ಪಾಸು ಮಾಡಿದ್ದ ಬಗ್ಗೆ ಈಚೆಗೆ ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ. ರಾಮ್​ ಪ್ರಕಾಶ್​ರ ಈ ಭಾವನಾತ್ಮಕ ಪೋಸ್ಟ್​ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪರಿಶ್ರಮಿ ಐಎಎಸ್​ ಅಧಿಕಾರಿಗೆ ಟ್ವಿಟರ್​ನಲ್ಲಿ 65 ಸಾವಿರಕ್ಕೂ ಅಧಿಕ ಹಿಂಬಾಲಕರಿದ್ದಾರೆ. ರಾಮ್ ಪ್ರಕಾಶ್ ರಾಜಸ್ಥಾನ ಕೇಡರ್‌ನ 2018 ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ:ಬ್ಯಾಂಕಲ್ಲ, 60 ಅಡಿ ಉದ್ದದ ಸೇತುವೆಯನ್ನೇ ಕದ್ದ ದರೋಡೆಕೋರರು! ಬಿಹಾರದಲ್ಲೊಂದು ವಿಚಿತ್ರ ಕಳವು

Last Updated : Apr 8, 2022, 8:34 PM IST

ABOUT THE AUTHOR

...view details