ಬದಾಯು(ಉತ್ತರಪ್ರದೇಶ):ಬಾಜಿ ಕಟ್ಟುವುದು ಅಕ್ರಮ. ಅದು ಪ್ರಾಣಕ್ಕೇ ಕುತ್ತು ತರುತ್ತೆ. ಇದನ್ನು ಲೆಕ್ಕಿಸದ ಉತ್ತರಪ್ರದೇಶದ ಯುವಕ ಸ್ನೇಹಿತರೊಂದಿಗೆ ದುಸ್ಸಾಹಕ್ಕೆ ಕೈಹಾಕಿ ಪ್ರಾಣ ಕಳೆದುಕೊಂಡಿದ್ದಾನೆ. ಜೀವನಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಈಗ ಕಣ್ಣೀರು ಹಾಕುತ್ತಿದೆ.
ಏನಾಯ್ತು?:ಉತ್ತರಪ್ರದೇಶದ ಬದಾಯು ಜಿಲ್ಲೆಯ ಸೈದ್ಪುರ ಗ್ರಾಮದಲ್ಲಿ ಕೆಲ ಯುವಕರು ಊರಿನ ಕೆರೆಯ ದಡದಲ್ಲಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುತ್ತಿದ್ದರು. ಮುಂಬೈನಲ್ಲಿ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ದಿಲ್ಷನ್ ಕೂಡ ಈ ವೇಳೆ ಕೆರೆಯ ದಡದಲ್ಲಿದ್ದ. ಸ್ನೇಹಿತರ ಮಧ್ಯೆ ಕೆರೆಯನ್ನು ಈಜಿ ದಾಟುವ ಬಗ್ಗೆ ಪ್ರಸ್ತಾಪವಾಗಿದೆ. ಅದರಂತೆ ದಿಲ್ಷನ್ ತಾನು ಈಜುವುದಾಗಿ ಬಾಜಿಗೆ ಮುಂದಾಗಿದ್ದಾನೆ.