ವಿಕಾರಾಬಾದ್ (ತೆಲಂಗಾಣ): ರೆಸಾರ್ಟ್ವೊಂದರಲ್ಲಿ ಆಯೋಜಿಸಿದ್ದ ಡೇಂಜರ್ ಗೇಮ್‌ನಲ್ಲಿ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ತೆಲಂಗಾಣದ ವಿಕಾರಾಬಾದ್ನಲ್ಲಿ ನಡೆದಿದೆ. 34 ವರ್ಷದ ಸಾಯಿಕುಮಾರ್ ಎಂಬಾತನೇ ಮೃತ ದುರ್ದೈವಿಯಾಗಿದ್ದು, ಇವರು ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.
ಇಲ್ಲಿನ ಗೋಧುಮಗೂಡ ಸಮೀಪದ ರೆಸಾರ್ಟ್ವೊಂದರಲ್ಲಿ ಅಡ್ವೆಂಚರ್ ಕ್ಲಬ್ ಆಶ್ರಯದಲ್ಲಿ ಇತ್ತೀಚೆಗೆ ರಾತ್ರಿ ಬಚ್ಚಿಟ್ಟಿದ್ದ ವಸ್ತುಗಳನ್ನು ಹುಡುಕಾಟ ನಡೆಸುವಂತಹ ಡೇಂಜರ್ ಗೇಮ್ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ಸುಮಾರು ನೂರು ಯುವಕರು ರೆಸಾರ್ಟ್‌ಗೆ ಬಂದಿದ್ದರು.