ಕರ್ನಾಟಕ

karnataka

ETV Bharat / bharat

ಒಂದಲ್ಲ, ಎರಡಲ್ಲ 49 ಖಡ್ಗ ಖರೀದಿಸಿ ಮನೆಯಲ್ಲಿಟ್ಟಿದ್ದ ಆರೋಪಿ ಬಂಧನ - Police seize 49 swords Aurangabad, 1 arrested

ಕೊರಿಯರ್​ ಮೂಲಕ ವ್ಯಕ್ತಿಯೋರ್ವ 49 ಖಡ್ಗಗಳಿಗೆ ಆರ್ಡರ್ ಮಾಡಿ ಈಗ ಪೊಲೀಸರು ಅತಿಥಿಯಾಗಿದ್ದಾನೆ. ಒಂದೇ ಬಾರಿಗೆ ಆತ ಇಷ್ಟೊಂದು ಕತ್ತಿಗಳ ಆರ್ಡರ್ ಮಾಡಿರುವುದು ಪತ್ತೆಯಾದ ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.

Police seize 49 swords Aurangabad, 1 arrested
ಒಂದಲ್ಲ ಎರಡಲ್ಲ ಬರೋಬ್ಬರಿ 49 ಕತ್ತಿ ಆರ್ಡರ್ ಮಾಡಿದ್ದ ಭೂಪ!

By

Published : Jul 4, 2021, 10:42 PM IST

ಔರಂಗಾಬಾದ್ (ಮಹಾರಾಷ್ಟ್ರ): ಕೊರಿಯರ್​ ಮೂಲಕ 49 ಖಡ್ಗಗಳ ಆರ್ಡರ್ ಮಾಡಿ ಮನೆಯಲ್ಲಿ ಸಂಗ್ರಹಿಸಿಟ್ಟ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಔರಂಗಾಬಾದ್​​ನಲ್ಲಿ ನಡೆದಿದೆ.

ಔರಂಗಾಬಾದ್ ಡಿಸಿಪಿ ದೀಪಕ್​​​​​ ಗಿರ್ಹೆ ಈ ಪ್ರಕರಣ ಕುರಿತು ಮಾಹಿತಿ ನೀಡಿದ್ದು, ವ್ಯಕ್ತಿಯೋರ್ವ 49 ಕತ್ತಿಗಳ ಆರ್ಡರ್ ಮಾಡಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಬೈಜಿಪುರದ ಇಂದಿರಾನಗರ ಬಳಿ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.

ಒಂದಲ್ಲ ಎರಡಲ್ಲ ಬರೋಬ್ಬರಿ 49 ಕತ್ತಿ ಆರ್ಡರ್ ಮಾಡಿದ್ದ ಭೂಪ!

ಆತ ಕತ್ತಿಗಳನ್ನು ಖರೀದಿಸಿ ಬಾಡಿಗೆ ರೂಪದಲ್ಲಿ ಬೇರೆಯವರಿಗೆ ನೀಡುತ್ತಿರುವುದಾಗಿ ಆತ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದಿದ್ದಾರೆ. ಪ್ರಕರಣ ಸಂಬಂಧ ವ್ಯಕ್ತಿ ಆರ್ಡರ್ ಮಾಡಿದ್ದ 49 ಕತ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ವೃದ್ದೆಯಿಂದ ಬ್ಯಾಗ್​ ಕಸಿದು ಪರಾರಿಯಾದ ದುಷ್ಕರ್ಮಿ: ಘಟನೆಯ ವಿಡಿಯೋ

ABOUT THE AUTHOR

...view details