ಕರ್ನಾಟಕ

karnataka

ETV Bharat / bharat

ಯುವಕನ ಕಿರುಕುಳದಿಂದ ಬೇಸತ್ತು ಶಾಲೆ ತೊರೆದ ವಿದ್ಯಾರ್ಥಿನಿ

ಶಾಲಾ ವಿದ್ಯಾರ್ಥಿನಿಯೊಬ್ಬರಿಗೆ ಯುವಕ ಕಿರುಕುಳ ನೀಡಿದ ಹಿನ್ನೆಲೆ ಮನನೊಂದ ವಿದ್ಯಾರ್ಥಿನಿ ಶಾಲೆಗೆ ಹೋಗುವುದನ್ನು ನಿಲ್ಲಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

By

Published : Sep 13, 2022, 9:02 PM IST

Updated : Sep 13, 2022, 9:09 PM IST

Up_bareilly_
ಯುವಕನ ಕಿರುಕುಳದಿಂದ ಬೇಸತ್ತು ಶಾಲೆ ತೊರೆದ ವಿದ್ಯಾರ್ಥಿನಿ

ಬರೇಲಿ/ಉತ್ತರಪ್ರದೇಶ್​: ಯುಪಿಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇತ್ತೀಚೆಗೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ರಹಿಯಾ ನಾಗ್ಲಾ ಗ್ರಾಮದಲ್ಲಿ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬ ಬಾಲಕಿಗೆ ಕಿರುಕುಳ ನೀಡಿದ್ದು, ಯುವಕನ ಕಿರುಕುಳದಿಂದ ಬೇಸತ್ತ ಬಾಲಕಿ ಶಾಲೆಗೆ ಹೋಗುವುದನ್ನು ನಿಲ್ಲಿಸಿರುವ ಘಟನೆ ನಡೆದಿದೆ.

ಈ ವೇಳೆ ವಿದ್ಯಾರ್ಥಿನಿಯ ಕುಟುಂಬಸ್ಥರು ಸೋಮವಾರ ಮಿರ್‌ಗಂಜ್ ಪೊಲೀಸ್ ಠಾಣೆಯ ಸಿಒ(ಸರ್ಕಲ್​ ಆಫೀಸರ್​) ಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಶಾಂತಿ ಭಂಗದ ಸೆಕ್ಷನ್‌ನಡಿ ಮೊಕದ್ದಮೆ ಹೂಡಿದ್ದಾರೆ. ದೂರಿನ ಪ್ರಕಾರ ಸ್ಥಳಿಯ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲೆಗೆ ಹೋಗುವ ಅದೇ ಗ್ರಾಮದ ಯುವಕ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಕಿರುಕುಳ ನೀಡಿದ್ದಾನೆ.

ಇದರಿಂದ ಮನನೊಂದ ವಿದ್ಯಾರ್ಥಿನಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದಾಗ ಯುವಕ ಆಕೆಯ ಚಿತ್ರಗಳನ್ನು ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಡಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿತ್ತು. ಆದರೆ ಪೊಲೀಸರು ಆರೋಪಿಯನ್ನು ಬಂಧಿಸದೇ ಶಾಂತಿಭಂಗ ಆರೋಪ ಎಂದು ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ಈ ಕುರಿತು ಸಿಒ ರಾಜ್‌ಕುಮಾರ್ ಮಿಶ್ರಾ ಅವರನ್ನು ಸಂಪರ್ಕಿಸಿದಾಗ ಅವರು ನಮ್ಮೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ:ಚುನಾವಣೆಗೆ ಟಿಕೆಟ್​ ಕೊಡಿಸುವ ಆಮಿಷ.. ಮಹಿಳೆ ಮೇಲೆ ಅತ್ಯಾಚಾರ ಆರೋಪ: ಎಂಎನ್‌ಎಸ್ ಮುಖಂಡನ ಬಂಧನ

Last Updated : Sep 13, 2022, 9:09 PM IST

ABOUT THE AUTHOR

...view details