ನೋಯ್ಡಾ: ಮನೆಯ ಹೊರಗೆ ಆಟವಾಡುತ್ತಿದ್ದಾಗ ಇಬ್ಬರು ಮಕ್ಕಳು ಚರಂಡಿಗೆ ಬಿದ್ದು ಸಾವಿಗೀಡಾಗಿದ್ದಾರೆ. ಘಟನೆಯ ನಂತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಬಿಹಾರದ ಸಮಸ್ತಿಪುರದ ನಿವಾಸಿ ಶಂಭು ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಸಿ -14, ಸೆಕ್ಟರ್ -85 ರಲ್ಲಿ ತಮ್ಮ ಪತ್ನಿ ಮತ್ತು ಐದು ಮಕ್ಕಳೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ಸಂಜೆ 4:30ಕ್ಕೆ ಹಿರಿಯ ಮಗಳು ರುಬೀನಾ (9) ಹತ್ತು ತಿಂಗಳ ಕಿರಿಯ ಸಹೋದರ ಸುಮಿತ್ ಕುಮಾರ್ನ ಜೊತೆ ಮನೆ ಬಳಿ ಆಟವಾಡುತ್ತಿದ್ದಳು. ಈ ವೇಳೆ ಇಬ್ಬರೂ ಅನುಮಾನಾಸ್ಪದವಾಗಿ ಚರಂಡಿಗೆ ಬಿದ್ದಿದ್ದಾರೆ.