ಕರ್ನಾಟಕ

karnataka

By ETV Bharat Karnataka Team

Published : Dec 30, 2023, 10:59 PM IST

ETV Bharat / bharat

ಪಂಚಾಯತ್ ಉಪ ಚುನಾವಣೆ: 90 ವರ್ಷದ ಅಜ್ಜಿಗೆ ಗೆಲುವು

Bihar Panchayat by poll Result: ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ಪಂಚಾಯತ್ ಉಪ ಚುನಾವಣೆಯಲ್ಲಿ 90 ವರ್ಷದ ವೃದ್ಧೆಯೊಬ್ಬರು ಜಯಭೇರಿ ಬಾರಿಸಿದ್ದಾರೆ.

ಚಿತ್ರ ಕೃಪೆ - ಐಎಎನ್ಎಸ್
ಚಿತ್ರ ಕೃಪೆ - ಐಎಎನ್ಎಸ್

ಪಾಟ್ನಾ (ಬಿಹಾರ): ಬಿಹಾರದ ಜಮುಯಿ ಜಿಲ್ಲೆಯಲ್ಲಿ ಶನಿವಾರ ನಡೆದ ಪಂಚಾಯತ್ ಉಪ ಚುನಾವಣೆಯಲ್ಲಿ 90 ವರ್ಷದ ವೃದ್ಧೆಯೊಬ್ಬರು ಗೆಲುವು ಸಾಧಿಸಿದ್ದಾರೆ. ಸುನೀತಾ ದೇವಿ ಎಂಬುವವರೇ ವಿಜೇತ ಅಭ್ಯರ್ಥಿಯಾಗಿದ್ದಾರೆ. ಈ ಮೂಲಕ ಇತ್ತೀಚೆಗೆ ನಿಧನರಾದ ತಮ್ಮ ಸೊಸೆಯ ಸ್ಥಾನವನ್ನು ಇವರು ತುಂಬಿದ್ದಾರೆ. ಸುನೀತಾ ದೇವಿ ತಮ್ಮ ಸಮೀಪದ ಪ್ರತಿಸ್ಪರ್ಧಿಯಾದ 53 ವರ್ಷದ ಲಲಿತಾ ದೇವಿ ಅವರನ್ನು 140 ಮತಗಳಿಂದ ಸೋಲಿಸಿದ್ದಾರೆ.

''ನನ್ನ ಹೆಂಡತಿಯ ಮರಣದ ನಂತರ ಬರ್ಹತ್ ಬ್ಲಾಕ್‌ನ ದಢಾ ಪಂಚಾಯತ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆದ ನನ್ನ ತಾಯಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪೂರ್ವದಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದರು. ಮತದಾರರು ನಮ್ಮ ತಾಯಿಯ ಉತ್ಸಾಹವನ್ನು ಗೌರವಿಸಿದ್ದಾರೆ. ಚುನಾವಣೆಯಲ್ಲಿ ಅವರು 140 ಮತಗಳ ಅಂತರದಿಂದ ಗೆದ್ದಿದ್ದಾರೆ. ಎದುರಾಳಿ ಅಭ್ಯರ್ಥಿ ಲಲಿತಾ ದೇವಿ ಅವರನ್ನು ಸೋಲಿಸಿದ್ದಾರೆ'' ಎಂದು ಸುನೀತಾ ದೇವಿ ಅವರ ಪುತ್ರ ವಿಜಯ್ ಯಾದವ್ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಸುನೀತಾ ದೇವಿ ಅವರು 'ಕಾಕಿ' ಹಾಗೂ 'ದಾದಿ' ಎಂದೇ ಗುರುತಿಸಿಕೊಂಡಿದ್ದರು. ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಲಲಿತಾ ದೇವಿ 1,588 ಮತಗಳು ಪಡೆದಿದ್ದರೆ, ಸುನೀತಾ ದೇವಿ 1,728 ಮತಗಳನ್ನು ಪಡೆಯುವ ಮೂಲಕ 140ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ. ವಿಜಯ್ ಯಾದವ್ ಈ ಹಿಂದೆ ದಢಾ ಪಂಚಾಯತ್‌ನ ಅಧ್ಯಕ್ಷರಾಗಿದ್ದರು. ಆದರೆ, ಚುನಾವಣಾ ಆಯೋಗವು ಈ ಸ್ಥಾನವನ್ನು ಮಹಿಳಾ ಮೀಸಲು ಎಂದು ಘೋಷಿಸಿತ್ತು. ಹೀಗಾಗಿ ಕಳೆದ ಬಾರಿ ಅವರ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಿ ಯಶಸ್ವಿಯಾಗಿದ್ದರು. ಇತ್ತೀಚೆಗೆ ಅವರು ನಿಧನವಾಗಿದ್ದಾರೆ. ಸದ್ಯ ವಿಜೇತ ಅಭ್ಯರ್ಥಿ ಸುನೀತಾ ದೇವಿ ಅವರಿಗೆ ನಾಲ್ವರು ಪುತ್ರರು ಹಾಗೂ 10 ಮೊಮ್ಮಕ್ಕಳಿದ್ದಾರೆ. (ಐಎಎನ್ಎಸ್)

ಇದನ್ನೂ ಓದಿ:550 ವರ್ಷಗಳ ಕಾಯುವಿಕೆಗೆ ಜ. 22 ರಂದು ಮುಕ್ತಿ, ಭಕ್ತರೇ ನೀವಿದ್ದ ಸ್ಥಳದಿಂದಲೇ ಶ್ರೀರಾಮನ ಪೂಜಿಸಿ: ಪ್ರಧಾನಿ ಮೋದಿ

ABOUT THE AUTHOR

...view details