ಕರ್ನಾಟಕ

karnataka

ETV Bharat / bharat

ಬಾಲಕಿ ಮೇಲೆ ಪೂಜಾರಿಯಿಂದ ಅತ್ಯಾಚಾರ, ಕೊಲೆ ಆರೋಪ.. ರಾಷ್ಟ್ರ ರಾಜಧಾನಿಯಲ್ಲಿ ದುಷ್ಕೃತ್ಯ - 9 ವರ್ಷದ ಬಾಲಕಿ ಮೇಲೆ ಪೂಜಾರಿಯಿಂದ ಅತ್ಯಾಚಾರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಮುಕರ ಅಟ್ಟಹಾಸ ಮಿತಿ ಮೀರಿದೆ. 9 ವರ್ಷದ ಬಾಲಕಿ ಮೇಲೆ ಪೂಜಾರಿಯೊಬ್ಬ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

rape
ಅತ್ಯಾಚಾರ

By

Published : Aug 2, 2021, 12:11 PM IST

ನವದೆಹಲಿ: ಕ್ಯಾಂಟ್ ಪ್ರದೇಶದಲ್ಲಿ ಪೂಜಾರಿಯೊಬ್ಬ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿರುವ ಆರೋಪ ಕೇಳಿ ಬಂದಿದೆ. ಬಾಲಕಿ ವಾಟರ್​ ಕೂಲರ್​ನಿಂದ ನೀರು ಪಡೆಯಲು ಹೋದಾಗ ಪೂಜಾರಿ ದುಷ್ಕೃತ್ಯವೆಸಗಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ.

ಪೂಜಾರಿ, ಮೊದಲಿಗೆ ಬಾಲಕಿ ವಿದ್ಯುತ್​​ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದನಂತೆ. ಜತೆಗೆ ಪೊಲೀಸರಿಗೆ ಈ ವಿಷಯ ತಿಳಿಸಿದರೆ, ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಂಗಾಂಗ ಕಳ್ಳತನ ಮಾಡುತ್ತಾರೆ ಎಂದು ಅವರ ತಾಯಿಗೆ ನಂಬಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನಡೆದ ದಿನ ಪೂಜಾರಿ, ಸಂಜೆ ಆರು ಗಂಟೆ ಸುಮಾರಿಗೆ ಬಾಲಕಿ ತಾಯಿಯನ್ನು ಸ್ಮಶಾನಕ್ಕೆ ಕರೆದೊಯ್ದು, ನಿಮ್ಮ ಮಗಳು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದನಂತೆ. ಬಳಿಕ ಆತನೇ ಶವವನ್ನು ಸುಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಕಾಮುಕನಿಗೆ ಜೀವಾವಧಿ ಶಿಕ್ಷೆ

ಅಂತ್ಯಸಂಸ್ಕಾರದ ಬಳಿಕ ಕುಟುಂಬಸ್ಥರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿ ಮೃತದೇಹದ ಮೇಲೆ ಸುಟ್ಟ ಗಾಯದ ಗುರುತುಗಳಿದ್ದವು. ಆದರೆ, ಅವು ವಿದ್ಯುತ್ ಸ್ಪರ್ಶಿಸಿ ಆದ ಗಾಯದ ಗುರುತುಗಳಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details