ಕರ್ನಾಟಕ

karnataka

ETV Bharat / bharat

ತ್ರಿಶೂರ್ ಟು ಲಡಾಖ್​: 4,500 ಕಿ.ಮೀ ಸೈಕಲ್​ ಸವಾರಿ ಕೈಗೊಂಡ ಕೇರಳದ 80 ವರ್ಷದ 'ಯುವಕ'!

ವೃತ್ತಿಯಲ್ಲಿ ನಳ ರಿಪೇರಿ ಮಾಡುವ ಜೋಸ್ ಅವರು​ ಹವ್ಯಾಸಿ ಸೈಕ್ಲಿಸ್ಟ್. ವಯಸ್ಸು 80. ಇದೀಗ ಕೇರಳದ ತ್ರಿಶೂರ್‌ನಿಂದ 4,500 ಕಿಲೋಮೀಟರ್ ಸೈಕಲ್ ತುಳಿದು ಲಡಾಖ್‌ ತಲುಪಿದ್ದಾರೆ. ಈ ಸೈಕಲ್​ ಯಾತ್ರೆಗೆ 'ವ್ಹೀಲ್ ಆಫ್ ಲೈಫ್' ಎಂದು ಅವರು ಹೆಸರಿಟ್ಟಿದ್ದಾರೆ.

By

Published : Sep 17, 2021, 9:05 PM IST

ತ್ರಿಶೂರ್ ಟು ಲಡಾಖ್
ತ್ರಿಶೂರ್ ಟು ಲಡಾಖ್

ತ್ರಿಶೂರ್: ದೇಹಕ್ಕೆ ಎಷ್ಟೇ ವಯಸ್ಸಾದರೂ ಮನಸ್ಸನ್ನು ಉಲ್ಲಾಸದಿಂದ ಇಟ್ಟುಕೊಳ್ಳುವುದು ಬಹಳ ಮುಖ್ಯ. 20 ವರ್ಷದ 'ವೃದ್ಧ'ರೂ ನಮ್ಮ ನಡುವೆ ಇದ್ದಾರೆ. 80 ವರ್ಷದ 'ಯುವಕ'ರೂ ಸಹ ನಮಗೆ ಕಾಣ ಸಿಗುತ್ತಾರೆ. ಹೀಗೊಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬವನ್ನು ಅವಿಸ್ಮರಣೀಯಗೊಳಿಸಲು ಸಜ್ಜಾಗಿ ಇಳಿವಯಸ್ಸಿನಲ್ಲಿ 4,500 ಕಿಲೋಮೀಟರ್ ದೂರ ಸೈಕಲ್ ತುಳಿದಿರುವ ಸ್ಟೋರಿ ಇದು.

ಇವರ ಹೆಸರು ಜೋಸ್‌: ಜೀವನದ ಮುಸ್ಸಂಜೆಯಲ್ಲಿದ್ದರೂ ಒಡಲಲ್ಲಿರುವ ಜೋಶ್‌ ಎಲ್ಲರಿಗೂ ಸ್ಫೂರ್ತಿ

ಕೇರಳ ಮೂಲದ ಜೋಸ್ ತಮ್ಮ ಜೀವನದಲ್ಲಿ ಒಂದು ಸ್ಮರಣೀಯ ಮೈಲಿಗಲ್ಲನ್ನು ತಲುಪುವ ಹಂಬಲ ಹೊಂದಿದ್ದರು. 80 ವರ್ಷ ವಯಸ್ಸಿನ ಇವರೀಗ ತ್ರಿಶೂರ್‌ನಿಂದ 4,500 ಕಿಲೋಮೀಟರ್ ಸೈಕಲ್ ತುಳಿದು ಲಡಾಖ್‌ ಎತ್ತರದ ಪ್ರದೇಶವನ್ನು ತಲುಪಿದ್ದಾರೆ.

ವೃತ್ತಿಯಲ್ಲಿ ನಳ ರಿಪೇರಿ ಮಾಡುವ ಜೋಸ್​ ಹವ್ಯಾಸಿ ಸೈಕ್ಲಿಸ್ಟ್ ಕೂಡಾ ಹೌದು. ಇದೀಗ ತಮ್ಮ ಜನ್ಮದಿನವನ್ನು ಸ್ಮರಣೀಯವಾಗಿಸಿಕೊಳ್ಳಲು ಕೇರಳದ ತ್ರಿಶೂರ್​ನಿಂದ ಲಡಾಖ್‌ವರೆಗೆ ಸೈಕಲ್​ ಯಾತ್ರೆ ಮಾಡಿದ್ದಾರೆ. ಲಡಾಖ್​ನ ಖರ್ದುಂಗ್ ಲಾ ವರೆಗೆ ಸೈಕಲ್ ಮೂಲಕ ಪ್ರಯಾಣಿಸಿದ್ದಾರೆ. ಈ ಪ್ರದೇಶ ಸಮುದ್ರಮಟ್ಟಕ್ಕಿಂತ 17,600 ಅಡಿ ಎತ್ತರದಲ್ಲಿದೆ. ಇದು ನಾಗರಿಕರಿಗೆ ಅನುಮತಿಸಲಾದ ಅತ್ಯುನ್ನತ ಮೋಟರೇಬಲ್ ಪಾಯಿಂಟ್ ಕೂಡಾ ಹೌದು. ಅನಿರೀಕ್ಷಿತ ಹಿಮಪಾತದಿಂದಾಗಿ ಜೋಸ್​ ಅಲ್ಲಿಂದ ಮುಂದುವರೆಯಲು ಸಾಧ್ಯವಾಗಲಿಲ್ಲ.

ಲಡಾಖ್‌ನ ವಿಹಂಗಮ ನೋಟ

ಈ ಸೈಕಲ್​ ಯಾತ್ರೆಗೆ 'ವ್ಹೀಲ್ ಆಫ್ ಲೈಫ್' ಎಂದು ಹೆಸರಿಟ್ಟಿರುವ ಜೋಸ್​ಗೆ ತ್ರಿಶೂರಿನ ಅಯ್ಯಂತೋಳೆಯಿಂದ ಗೋಕುಲ್ ಪಿ.ಆರ್ (2013ರಲ್ಲಿ ತ್ರಿಶೂರಿನಿಂದ ಮನಾಲಿ ಮೂಲಕ ಖಾರ್ದುಂಗ್ ಲಾಗೆ ಸೈಕ್ಲಿಂಗ್ ಪ್ರವಾಸ ಕೈಗೊಂಡಿದ್ದರು) ಸಾಥ್​ ನೀಡಿದ್ದರು. ಗೋಕುಲ್ ಅವರ ಪತ್ನಿ ಡಾ.ಲೇಖಾ ಲಕ್ಷ್ಮಿ ಮತ್ತು 14 ವರ್ಷದ ಮಗಳು ಲಡಾಖ್‌ನಿಂದ ವಿಮಾನದಲ್ಲಿ ತಲುಪಿದ ನಂತರ ಅವರೊಂದಿಗೆ ಸೇರಿಕೊಂಡಿದ್ದಾರೆ.

80 ವರ್ಷದಲ್ಲೂ ಅದೆಂಥಾ ಜೋ'ಶ್'!​

"ನಾನು ಒಂಬತ್ತು ದಿನಗಳ ಹಿಂದೆ ಲೇಹ್ ತಲುಪಿದಾಗ ನನಗೆ ಆಮ್ಲಜನಕದ ಸಮಸ್ಯೆ ಎದುರಾಯಿತು. ಆದರೆ ನನ್ನ ಸಹಸೈಕ್ಲಿಸ್ಟ್‌ಗಳು ಕೃತಕ ಆಮ್ಲಜನಕವನ್ನು ಪೂರೈಸುವ ಮೂಲಕ ನನಗೆ ಬೆಂಬಲ ನೀಡಿದರು" ಎಂದು ಜೋಸ್​ ಹೇಳಿದ್ದಾರೆ.

ಜೋಸ್​, ಗೋಕುಲ್​ ಮತ್ತು ಅವರ ಪತ್ನಿ, ಮಗಳು

ಜೋಸ್ ಅವರ ಪತ್ನಿ ಮತ್ತು ಮೂವರು ಮಕ್ಕಳು ಅವರ ಸಾಧನೆಯ ಬಗ್ಗೆ ಉತ್ಸುಕರಾಗಿದ್ದಾರೆ. ಗೋಕುಲ್ ಅವರ ಸೋದರ ಸಂಬಂಧಿ ಅಜಯನ್, ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ಸೇವೆಯಲ್ಲಿದ್ದಾರೆ. ಅವರ ಸಹಾಯದಿಂದ ಜೋಸ್​ ಅವರಿಗೆ ಹೆಚ್ಚಿನ ಭದ್ರತಾ ಪ್ರದೇಶಗಳು ಮತ್ತು ಕಠಿಣ ಭೂಪ್ರದೇಶಗಳ ಮೂಲಕ ಹಾದುಹೋಗಲು ಬೆಂಬಲ ದೊರೆತಿದೆ.

ತ್ರಿಶೂರ್ ಟು ಲಡಾಖ್: ಜೋಸ್‌ ಅವರ ಸೈಕಲ್‌ ಯಾತ್ರೆ

For All Latest Updates

ABOUT THE AUTHOR

...view details