ಕರ್ನಾಟಕ

karnataka

ETV Bharat / bharat

1988ರಲ್ಲಿ ಚೇರನ್​ ಸಾರಿಗೆ ಸಂಸ್ಥೆ ವಂಚನೆ ಪ್ರಕರಣ.. ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ, ₹ 3 ಕೋಟಿ ದಂಡ - ಕೊಯಮತ್ತೂರಿನ ಒಂದನೇ ಹೆಚ್ಚುವರಿ ಅಧೀನ ನ್ಯಾಯಾಲಯ

35 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ ಕೊಯಮತ್ತೂರಿನ ಒಂದನೇ ಹೆಚ್ಚುವರಿ ಅಧೀನ ನ್ಯಾಯಾಲಯ ಅಪರಾಧಿಗೆ ಇದೀಗ ಜೈಲು ಶಿಕ್ಷೆ ವಿಧಿಸಿದೆ.

ಕೋತಂಡಪಾಣಿ
ಕೋತಂಡಪಾಣಿ

By

Published : Jul 29, 2023, 11:31 AM IST

ಕೊಯಮತ್ತೂರು (ತಮಿಳುನಾಡು):ನಕಲಿ ದಾಖಲೆಗಳ ಮೂಲಕ ಚೇರನ್ ಸಾರಿಗೆ ನಿಗಮಕ್ಕೆ 28 ಲಕ್ಷ ರೂ. ನಷ್ಟ ಮಾಡಿರುವ ಚೇರನ್​ ಸಾರಿಗೆ ಸಂಸ್ಥೆಯ ಮಾಜಿ ಉದ್ಯೋಗಿಗೆ 7 ವರ್ಷ ಜೈಲು ಶಿಕ್ಷೆಯನ್ನು ಕೊಯಮತ್ತೂರಿನ ಒಂದನೇ ಹೆಚ್ಚುವರಿ ಅಧೀನ ನ್ಯಾಯಾಲಯದ ನ್ಯಾಯಾಧೀಶ ಪಿ ಕೆ ಶಿವಕುಮಾರ್ ವಿಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ (ಟಿಎನ್‌ಎಸ್‌ಟಿಸಿ), ಚೇರನ್ ಸಾರಿಗೆ ನಿಗಮದ ಕೊಯಮತ್ತೂರು ವಿಭಾಗವು ತನ್ನ ಪ್ರಧಾನ ಕಚೇರಿಯೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. 1986 ಮತ್ತು 1988 ನವೆಂಬರ್​ನಲ್ಲಿ ಚೇರನ್ ಸಾರಿಗೆ ಸಂಸ್ಥೆಯ ಹಳೆಯ ಬಸ್​ಗಳ ಹರಾಜು ಪ್ರಕ್ರಿಯೆ ನಡೆದಿದೆ.

ಈ ವೇಳೆ ಸಾರಿಗೆ ನಿಗಮದ 8 ನೌಕರರು ನಕಲಿ ದಾಖಲೆಗಳನ್ನು ತಯಾರಿಸಿ ಬಸ್​ಗಳನ್ನು ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ. ಜೊತೆಗೆ ಆರೋಪಿಗಳು ಪೂರ್ಣ ಹಣ ಪಡೆಯದೆ ಹರಾಜಿನಲ್ಲಿ ಗೆದ್ದ ವ್ಯಕ್ತಿಗಳಿಗೆ 14 ಬಸ್‌ಗಳನ್ನು ಮತ್ತು ಭಾಗಶಃ ಹಣ ಪಡೆದು 44 ಬಸ್‌ಗಳನ್ನು ನೀಡಿದ್ದರು. ಈ ಅಪರಾಧದಿಂದ ಚೇರನ್ ಸಾರಿಗೆ ಸಂಸ್ಥೆಗೆ ಒಟ್ಟು 28,20,094 ರೂ. ನಷ್ಟ ಮಾಡಿದ್ದಾರೆ. ಈ ಆರೋಪವನ್ನು ಮಾಡಿ ಸಿಟಿಸಿ ಸಂಸ್ಥೆಯ ಜನರಲ್ ಮ್ಯಾನೇಜರ್ ದೂರು ನೀಡಿದ್ದು, 8 ಮಂದಿ ನೌಕರರ ವಿರುದ್ಧ ಆರ್‌ಎಸ್ ಪುರಂ ಪೊಲೀಸರು 1988 ರಲ್ಲಿ ಕೇಸು ದಾಖಲಿಸಿದ್ದರು.

ಸಿಬಿ-ಸಿಐಡಿ ಮೂಲಕ ಈ ಪ್ರಕರಣ ತನಿಖೆ ನಡೆದು ಡಿಸೆಂಬರ್​ 1990 ರಲ್ಲಿ 8 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ಇಲ್ಲಿವರೆಗೆ ನಡೆದು ಬಂದಿದೆ. ಇದರ ಮಧ್ಯೆ ಒಟ್ಟು 4 ಆರೋಪಿಗಳು ಸಾವನ್ನಪ್ಪಿದ್ದಾರೆ. ಇನ್ನುಳಿದ 4 ಆರೋಪಿಗಳಲ್ಲಿ 3 ಮಂದಿ ಆರೋಪಿಗಳನ್ನು ನ್ಯಾಯಾಲಯ ಬಿಡಿಗಡೆ ಮಾಡಿದೆ. ಆದರೆ ಮಾಜಿ ಉದ್ಯೋಗಿ ಪಿ ಕೋತಂಡಪಾಣಿ (82) ವಿರುದ್ಧ 3 ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಸಾಬೀತಾಗಿದ್ದು, ಅಪರಾಧಗಳ ಲೆಕ್ಕಚಾರದಲ್ಲಿ ಒಟ್ಟು 383 ವರ್ಷ ಜೈಲು ಶಿಕ್ಷೆ ನೀಡಿತ್ತು.

ಆದರೆ ಆರೋಪಿಯ ವಯಸ್ಸನ್ನು ಪರಿಗಣಿಸಿ ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿ 7 ವರ್ಷಕ್ಕೆ ಇಳಿಸಿ ಶಿಕ್ಷೆ ನೀಡಿದ್ದಾರೆ. ಜೊತೆಗೆ 3.32 ಕೋಟಿ ರೂ. ದಂಡ ವಿಧಿಸಿದ್ದು ದಂಡದ ಮೊತ್ತವನ್ನು ಕೊಯಮತ್ತೂರು ರಾಜ್ಯ ಸಾರಿಗೆ ಸಂಸ್ಥೆಗೆ ಪಾವತಿಸಬೇಕು. ದಂಡ ಪಾವತಿಸಲು ವಿಫಲವಾದದಲ್ಲಿ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೊಯಮತ್ತೂರಿನ ಒಂದನೇ ಹೆಚ್ಚುವರಿ ಅಧೀನ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. ಇದೀಗ 35 ವರ್ಷದ ಹಳೆ ವಂಚನೆಗೆ 383 ವರ್ಷ ಜೈಲು ಶಿಕ್ಷೆ ಘೋಷಿಸಿರುವುದು ಭ್ರಷ್ಟರಿಗೆ ನಡುಕ ಹುಟ್ಟಿಸಿದೆ.

383 ವರ್ಷ ಯಾಕೆ?: ಕೋತಂಡಪಾಣಿ ವಿರುದ್ಧ ಆರೋಪ ಸಾಬೀತಾಗಿ ನಂಬಿಕೆ ವಂಚನೆ ಸೆಕ್ಷನ್ ಅಡಿಯಲ್ಲಿ 1 ಅಪರಾಧಕ್ಕೆ 4 ವರ್ಷ ಶಿಕ್ಷೆಯಂತೆ 47 ಅಪರಾಧಗಳಿಗಾಗಿ 188 ವರ್ಷ, ಹಾಗೆ ನಕಲಿ 47 ಅಪರಾಧಗಳಿಗೆ ತಲಾ 4 ವರ್ಷದಂತೆ ಒಟ್ಟು 188 ವರ್ಷ, ಮತ್ತು ಸರ್ಕಾರಿ ಆಸ್ತಿ ಕಬಳಿಕೆಗೆ 7 ವರ್ಷ. ಒಟ್ಟಾರೆ 383 ವರ್ಷ ವಿಧಿಸಿತ್ತು. ಮೊದಲೇ ಹೇಳಿದಂತೆ ಅಪರಾಧಿಗೆ ಈಗಾಗಲೇ 82 ವರ್ಷ ವಯಸ್ಸಾಗಿರುವುದರಿಂದ ಶಿಕ್ಷೆ ಕಡಿತಗೊಳಿಸಿ 7 ವರ್ಷಕ್ಕೆ ಇಳಿಸಿದ್ದಾರೆ.

ಆರೋಪಿಗಳು ಯಾರ್ಯಾರು?: ಚೇರನ್ ಸಾರಿಗೆ ಸಂಸ್ಥೆಯಲ್ಲಿ ಸಹಾಯಕರಾಗಿದ್ದ ಅಪರಾಧಿ ಕೋತಂಡಪಾಣಿ (82), ಉಪ ವ್ಯವಸ್ಥಾಪಕ ರಾಮಚಂದ್ರನ್, ನಾಗರಾಜನ್, ನಟರಾಜನ್, ಮುರುಗನಾಥನ್, ದುರೈಸಾಮಿ, ರಂಗನಾಥನ್ ಮತ್ತು ರಾಜೇಂದ್ರನ್. ತನಿಖೆಯ ವೇಳೆ ರಾಮಚಂದ್ರನ್, ನಟರಾಜನ್, ರಂಗನಾಥನ್ ಮತ್ತು ರಾಜೇಂದ್ರನ್ ಸಾವನ್ನಪ್ಪಿದವರು. ಪ್ರಕರಣದ ತೀರ್ಪು ಹೊರಬಿದ್ದ ದಿನ ನ್ಯಾಯಾಲಯಕ್ಕೆ ಕೋತಂಡಪಾಣಿ, ನಾಗರಾಜನ್, ಮುರುಗನಾಥನ್ ಮತ್ತು ದುರೈಸಾಮಿ ಹಾಜರಾಗಿದ್ದರು. ನ್ಯಾಯಾಧೀಶ ಶಿವಕುಮಾರ್ ನೀಡಿದ ತೀರ್ಪಿನಲ್ಲಿ ಕೋತಂಡಪಾಣಿ ಹೊರತುಪಡಿಸಿ ಇತರ 3 ಜನರನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:28 ವರ್ಷಗಳ ಹಿಂದಿನ ವಂಚನೆ ಪ್ರಕರಣ: ನಿವೃತ್ತ ಜೂನಿಯರ್ ಇಂಜಿನಿಯರ್‌ಗೆ 10 ವರ್ಷ ಜೈಲು ಶಿಕ್ಷೆ

ABOUT THE AUTHOR

...view details