ಕರ್ನಾಟಕ

karnataka

ETV Bharat / bharat

ನದಿಗೆ ಉರುಳಿ ಬಿದ್ದ ಸೇನಾ ವಾಹನ: 7 ಯೋಧರು ಹುತಾತ್ಮ, 19 ಸೈನಿಕರಿಗೆ ಗಾಯ

26 ಸೇನಾ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಮಿಲಿಟರಿ ವಾಹನವೊಂದು ಉರುಳಿ ಬಿದ್ದಿರುವ ಪರಿಣಾಮ 7 ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದು, 19 ಸೈನಿಕರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

Indian Army soldiers lost their lives
Indian Army soldiers lost their lives

By

Published : May 27, 2022, 4:41 PM IST

Updated : May 27, 2022, 7:03 PM IST

ಲಡಾಖ್​(ಜಮ್ಮು-ಕಾಶ್ಮೀರ): ಭಾರತೀಯ ಸೇನಾ ವಾಹನದಲ್ಲಿ ಯೋಧರು ಪ್ರಯಾಣಿಸುತ್ತಿದ್ದ ವೇಳೆ, ನಿಯಂತ್ರಣ ಕಳೆದುಕೊಂಡು ನದಿಗೆ ಉರುಳಿ ಬಿದ್ದಿರುವ ಘಟನೆ ಜಮ್ಮು-ಕಾಶ್ಮೀರದ ಲಡಾಖ್​ನಲ್ಲಿ ನಡೆದಿದೆ. ಪರಿಣಾಮ ಏಳು ಯೋಧರು ಹುತಾತ್ಮರಾಗಿದ್ದಾರೆ. ಉಳಿದಂತೆ 19 ಯೋಧರು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ತುರ್ತುಕ್​​ ಸೆಕ್ಟರ್​ನ ಲಡಾಖ್​​ನಲ್ಲಿ ಈ ಘಟನೆ ನಡೆದಿದೆ.

ನದಿಗೆ ಉರುಳಿ ಬಿದ್ದ ಸೇನಾ ವಾಹನ: 7 ಯೋಧರು ಹುತಾತ್ಮ, 19 ಸೈನಿಕರಿಗೆ ಗಾಯ

ಗಂಭೀರವಾಗಿ ಗಾಯಗೊಂಡವರನ್ನ ವಿಮಾನದ ಮೂಲಕ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡುವ ಕೆಲಸ ಮಾಡಲಾಗ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. 26 ಸೈನಿಕರ ತಂಡ ಪಾರ್ತಾಪುರದ ಟ್ರಾನ್ಸಿಟ್​​ ಕ್ಯಾಂಪ್​​ನಿಂದ ಮುಂದಿನ ಸ್ಥಳಕ್ಕೆ ಪ್ರಯಾಣಿಸುತ್ತಿತ್ತು. ಬೆಳಗ್ಗೆ 9 ಗಂಟೆಗೆ ಥೋಯಿಸ್​ನಿಂದ 25 ಕಿಲೋ ಮೀಟರ್ ದೂರ ಚಲಿಸಿದ ಬಳಿಕ ಸೇನಾ ವಾಹನ ಸ್ಕಿಡ್​​ ಆಗಿ ಲಡಾಖ್​ನ ತುರ್ತುಕ್​ ಸೆಕ್ಟರ್​ನ ಶ್ಯೋಕ್ ನದಿಯಲ್ಲಿ ಉರುಳಿ ಬಿದ್ದಿದೆ. ಪರಿಣಾಮ ಏಳು ಯೋಧರು ಹುತಾತ್ಮರಾಗಿದ್ದಾರೆ.

ವಾಹನ ಸುಮಾರು 50-60 ಅಡಿ ಆಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೆ ಏಳು ಯೋಧರು ಹುತಾತ್ಮರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, 19 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನೆಲ್ಲ ಚಂಡಿಮಂದಿರ್​ ಕಮಾಂಡ್​ ಆಸ್ಪತ್ರೆಗೆ ಏರ್​ಲಿಫ್ಟ್​ ಮಾಡಲಾಗಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಲಾಗಿದೆ.

ಇದನ್ನು ಓದಿ:ಮಹಾರಾಷ್ಟ್ರದ ವಘೋಬಾ ಘಾಟ್‌ ಬಳಿ ಕಂದಕಕ್ಕೆ ಉರುಳಿದ ಬಸ್: 15 ಮಂದಿಗೆ ಗಾಯ

Last Updated : May 27, 2022, 7:03 PM IST

ABOUT THE AUTHOR

...view details