ಕರ್ನಾಟಕ

karnataka

ETV Bharat / bharat

ಕಲಾಪಕ್ಕೆ ಅಡ್ಡಿ: ಟಿಎಂಸಿಯ ಆರು ಸದಸ್ಯರು ರಾಜ್ಯಸಭೆಯಿಂದ ಅಮಾನತು - ಆರು ಟಿಎಂಸಿ ಸಂಸದರು ಅಮಾನತು

ಕಲಾಪಕ್ಕೆ ಅಡ್ಡಿ ಹಾಗೂ ಸಂಸತ್​ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್​ನ ಆರು ಸದಸ್ಯರು ಒಂದು ದಿನದ ಮಟ್ಟಿಗೆ ಅಮಾನತುಗೊಂಡಿದ್ದಾರೆ.

TMC MP
TMC MP

By

Published : Aug 4, 2021, 5:27 PM IST

Updated : Aug 4, 2021, 5:52 PM IST

ನವದೆಹಲಿ:ಕಲಾಪಕ್ಕೆ ಅಡ್ಡಿಪಡಿಸಿರುವ ಕಾರಣ ತೃಣಮೂಲ ಕಾಂಗ್ರೆಸ್​ನ ಆರು ಸದಸ್ಯರು ಇದೀಗ ರಾಜ್ಯಸಭೆಯಿಂದ ಅಮಾನತುಗೊಂಡಿದ್ದಾರೆ. ಒಂದು ದಿನದ ಮಟ್ಟಿಗೆ ಅವರನ್ನ ಅಮಾನತು ಮಾಡಿ ಸದನದಿಂದ ಹೊರಹಾಕಲಾಗಿದೆ ಎಂದು ಸಂಸತ್​ನ ಸೆಕ್ರೆಟರಿ ಜನರಲ್​ ದೇಶ್ ದೀಪಕ್​ ವರ್ಮಾ ತಿಳಿಸಿದ್ದಾರೆ.

ಪೆಗಾಸಸ್​ ವಿಚಾರವನ್ನಿಟ್ಟುಕೊಂಡು ಸದನದಲ್ಲಿ ಗದ್ದಲ ಮಾಡಿರುವ ಜೊತೆಗೆ ಅಲ್ಲಿನ ನಿಯಮ ಉಲ್ಲಂಘನೆ ಮಾಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ತೃಣಮೂಲ ಕಾಂಗ್ರೆಸ್​ನ ದೋಲಾ ಸೇನ್​, ನದೀಮುಲ್ಲಾ ಹಾಕ್ವ್​, ಅಭೀರ್​ ರಂಜನ್​ ಬಿಸ್ವಾಸ್​, ಶಾಂತ ಚೆತ್ರೀ, ಅರ್ಪಿತಾ ಘೋಷ್​, ಮೌಸಮ್ ನೂರ್​ ಅಮಾನತುಗೊಂಡಿದ್ದಾರೆ.

ಟಿಎಂಸಿ ಆರು ಸಂಸದರ ಅಮಾನತು

ಇದನ್ನೂ ಓದಿರಿ: 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಮೃತದೇಹ ಮರಕ್ಕೆ ಕಟ್ಟಿ ಹಾಕಿದ ಕಾಮುಕರು

ಮುಂಗಾರು ಅಧಿವೇಶನ ಆರಂಭಗೊಂಡಾಗಿನಿಂದಲೂ ವಿಪಕ್ಷಗಳು ಪೆಗಾಸಸ್​ ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ನಿತ್ಯ ಇದೇ ವಿಚಾರವಾಗಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವ ವಿಪಕ್ಷಗಳು ಸುಗಮ ಕಲಾಪಕ್ಕೆ ದಾರಿ ಮಾಡಿಕೊಟ್ಟಿಲ್ಲ. ಇಂದು ಕೂಡ ಸದನದಲ್ಲಿ ಗದ್ದಲ ನಡೆಸಿರುವುದಕ್ಕಾಗಿ ಅಮಾನತುಗೊಳಿಸಲಾಗಿದೆ.

Last Updated : Aug 4, 2021, 5:52 PM IST

ABOUT THE AUTHOR

...view details