ನವದೆಹಲಿ:ದೇಶದ ಟೆಲಿಕಾಂ ವಲಯದಲ್ಲಿ ಗುರುತರ ಬದಲಾವಣೆಗೆ ಕಾರಣವಾಗಲಿರುವ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಹರಾಜು ಪಕ್ರಿಯೆ ಕಳೆದ ಏಳು ದಿನಗಳಿಂದ ನಡೆಯುತ್ತಿತ್ತು. ಮುಕೇಶ್ ಅಂಬಾನಿ ಒಡೆತನದ ಜಿಯೋ 88,078 ಕೋಟಿ ರೂಪಾಯಿ ಮೌಲ್ಯದ ಸ್ಪೆಕ್ಟ್ರಂ ಖರೀದಿಸಿ ಅಗ್ರ ಬಿಡ್ದಾರನಾಗಿ ಹೊರಹೊಮ್ಮಿದೆ.
ಕಳೆದೊಂದು ವಾರದಿಂದ ನಡೆದ ಹರಾಜು ಪ್ರಕ್ರಿಯೆಯಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ಟೆಲಿಕಾಂ ತರಂಗಾಂತರ ಮಾರಾಟವಾಗಿದೆ. ಹೈ ಸ್ಪೀಡ್ ಇಂಟರ್ನೆಟ್‌ಗಾಗಿ ನೀಡಲಾದ ಈ ಸ್ಪೆಕ್ಟ್ರಮ್‌ನ ಹರಾಜು ಮೊತ್ತ ಕಳೆದ ವರ್ಷ ಮಾರಾಟವಾದ 4ಜಿ ಸ್ಪೆಕ್ಟ್ರಮ್ ಹರಾಜು ಮೊತ್ತಕ್ಕಿಂತ ದುಪ್ಪಟ್ಟಾಗಿದೆ. ಜಿಯೋ ನಂತರ ಭಾರ್ತಿ ಏರ್‌ಟೆಲ್ 43,084 ಕೋಟಿ ರೂ, ಹಾಗೂ ವೊಡಾಫೋನ್ ಐಡಿಯಾ ಲಿಮಿಟೆಡ್ 18,784 ಕೋಟಿ ರೂ. ಮೌಲ್ಯದ ತರಂಗಾಂತರ ಖರೀದಿಸಿ ನಂತರದ ಸ್ಥಾನಗಳಲ್ಲಿವೆ. ಹರಾಜು ಪ್ರಕ್ರಿಯೆಯಿಂದ ಕೇಂದ್ರ ಸರ್ಕಾರ ದಾಖಲೆಯ 1.5 ಲಕ್ಷ ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ.