ಕರ್ನಾಟಕ

karnataka

ETV Bharat / bharat

ಸಿಡಿಲು ಬಡಿದು ಒಂದೇ ಕುಟುಂಬದ ಐವರು ದುರ್ಮರಣ - ಸಿಡಿಲು ಬಡಿದು ಒಂದೇ ಕುಟುಂಬದ ಐವರು ದುರ್ಮರಣ

ಒಂದೇ ಕುಟುಂಬದ ಎಲ್ಲರೂ ಹೊಲದಲ್ಲಿ ಭತ್ತ ನಡೆಲು ಹೋಗಿದ್ದರು. ಗುಡುಗ ಸಹಿತ ಭಾರೀ ಮಳೆ ಸುರಿಯುತ್ತಿದ್ದ ಕಾರಣ ಹೊಲದ ಪಕ್ಕದಲ್ಲಿನ ಮರದ ಕೆಳಗೆ ನಿಂತಿದ್ದರು. ಈ ವೇಳೆ ಅವಘಡ ಸಂಭವಿಸಿದೆ.

Thuderclap
Thuderclap

By

Published : Jul 3, 2021, 8:27 PM IST

ಖುಂಟಿ(ಜಾರ್ಖಂಡ್): ಸಿಡಿಲು ಬಡಿದು ಒಂದೇ ಕುಟುಂಬದ ಐವರು ದುರ್ಮರಣಕ್ಕೀಡಾಗಿರುವ ಘಟನೆ ಜಾರ್ಖಂಡ್​ನ ಖುಂಟಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಎರಡೂವರೆ ವರ್ಷದ ಮಗು ಕೂಡ ಸಾವನ್ನಪ್ಪಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಒಂದೇ ಕುಟುಂಬದ ಎಲ್ಲರೂ ಹೊಲದಲ್ಲಿ ಭತ್ತ ನಡೆಲು ಹೋಗಿದ್ದರು. ಭಾರೀ ಮಳೆ ಸುರಿಯುತ್ತಿದ್ದ ಕಾರಣ ಎಲ್ಲರೂ ಹೊಲದ ಪಕ್ಕದಲ್ಲಿನ ಮರದ ಕೆಳಗೆ ನಿಂತಿದ್ದರು. ಈ ವೇಳೆ ಹಠಾತ್​ ಆಗಿ ಸಿಡಿಲು ಹೊಡೆದಿರುವ ಕಾರಣ ಎಲ್ಲರೂ ಮೃತಪಟ್ಟಿದ್ದಾರೆ.

ಸಿಡಿಲು ಬಡಿದು ಒಂದೇ ಕುಟುಂಬದ ಐವರು ದುರ್ಮರಣ

ಘಟನಾ ಸ್ಥಳಕ್ಕೆ ಪೊಲೀಸರು ಸೇರಿದಂತೆ ಅನೇಕ ಅಧಿಕಾರಿಗಳು ಭೇಟಿ ನೀಡಿ, ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಾವನ್ನಪ್ಪಿದವರನ್ನ 55 ವರ್ಷದ ಮುಂಡಾ, ಪತ್ನಿ ಜೀವಂತಿ, ಮಗ ಪೂನಾ ಮುಂಡಾ, ಸೊಸೆ ಪ್ರೇಮಾ ಹಾಗೂ ಮೊಮ್ಮಗ ಆಯುಷ್​ ಎನ್ನಲಾಗಿದೆ.

ABOUT THE AUTHOR

...view details