ನವದೆಹಲಿ: ಮಹಾಮಾರಿ ಕೊರೊನಾ ವೈರಸ್ಗೆ ಇದೀಗ ಐದು ತಿಂಗಳ ಮಗುವೊಂದು ಬಲಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಅದರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಜ್ವರದಿಂದ ಬಳಲುತ್ತಿದ್ದ ಐದು ತಿಂಗಳ ಮಗುವನ್ನ ದಿಲ್ಶಾದ್ ಗಾರ್ಡ್ನಲ್ಲಿರುವ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತದನಂತರ ಚಾಚಾ ನೆಹರೂ ಬಾಲ್ ಚಿಕಿತ್ಸಾಲಯಕ್ಕೆ ಮಗುವನ್ನ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಸೋಂಕು ತಗುಲಿರುವುದು ದೃಢಗೊಂಡಿದೆ. ಹೀಗಾಗಿ ಮಗುವನ್ನ ಜಿಟಿಬಿ ಆಸ್ಪತ್ರೆ ಕರೆದೊಯ್ಯಲಾಗಿದೆ. ಮಗುವನ್ನ ಮೇ. 6ರಿಂದ ವೆಂಟಿಲೇಟರ್ನಲ್ಲಿಟ್ಟಿದ್ದರೂ ಮೇ 12ರಂದು ಸಾವನ್ನಪ್ಪಿದೆ. ಸೀಮಾಪುರಿ ಶವಾಗಾರದಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಸಲಾಗಿದೆ.