ಕರ್ನಾಟಕ

karnataka

ರಾಜಸ್ಥಾನದ ಎರಡು ಉದ್ಯಮ ಸಂಸ್ಥೆಗಳ ಮೇಲೆ ಐಟಿ ದಾಳಿ: 41 ಕೋಟಿ ಅಕ್ರಮ ಹಣ ಪತ್ತೆ

ರಾಜಸ್ಥಾನದ ಎರಡು ದೊಡ್ಡ ಉದ್ಯಮಿಗಳ ಗುಂಪುಗಳ ಮೇಲೆ ಆದಾಯ ತೆರಿಗೆ ದಾಳಿಯ ವೇಳೆ 41 ಕೋಟಿ ರೂ. ಮೌಲ್ಯದ ಕಪ್ಪು ಹಣ ಪತ್ತೆಯಾಗಿದೆ.

By

Published : Feb 14, 2022, 6:03 PM IST

Published : Feb 14, 2022, 6:03 PM IST

ome Tax Raid On Two Big Business Groups Of Rajasthan
ರಾಜಸ್ಥಾನದ ಎರಡು ಉದ್ಯಮ ಸಂಸ್ಥೆಗಳ ಮೇಲೆ ಐಟಿ ದಾಳಿ

ಜೈಪುರ (ರಾಜಸ್ಥಾನ) : ಅಕ್ರಮ ಹಣ ಗಳಿಕೆ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ರಾಜ್ಯದ ಎರಡು ದೊಡ್ಡ ಉದ್ಯಮ ಸಂಸ್ಥೆಗಳಾದ ತಿರುಪತಿ ಗ್ರೂಪ್ ಮತ್ತು ಬಾಬಾ ಗ್ರೂಪ್​ನ 43 ಸ್ಥಳಗಳ ಮೇಲೆ ಗೆರಿಲ್ಲಾ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ, ಸುಮಾರು 41 ಕೋಟಿ ರೂ. ಕಪ್ಪು ಹಣ ಪತ್ತೆಯಾಗಿದೆ.

ಎರಡು ಉದ್ಯಮಗಳ ಸ್ಥಳಗಳಲ್ಲಿ ಇದುವರೆಗೆ 4.30 ಕೋಟಿ ರೂ.ಮೌಲ್ಯದ ನಗದು ಹಾಗೂ 6.30 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಾಬಾ ಗ್ರೂಪ್ ಸುಮಾರು 30 ಕೋಟಿ ಹಾಗೂ ತಿರುಪತಿ ಗ್ರೂಪ್ 11 ಕೋಟಿ ಅಘೋಷಿತ ಆದಾಯವನ್ನು ಒಪ್ಪಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಟಿ ದಾಳಿ ನಡೆಸಿದ ಸಂಸ್ಥೆ

ತನಿಖೆ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಉದ್ಯಮ ಸಮೂಹದ ಕೋಟ್ಯಂತರ ರೂ. ಮೌಲ್ಯದ ಅಕ್ರಮ ವಹಿವಾಟಿನ ದಾಖಲೆಗಳನ್ನು ವಶಪಡಿಸಿಕೊಂಡಿದ್ದು,ತಿರುಪತಿ ಮತ್ತು ಬಾಬಾ ಗ್ರೂಪ್ ಮೇಲೆ ಇಲಾಖೆ ಕ್ರಮ ಕೈಗೊಂಡಿದೆ.

ಆದಾಯ ತೆರಿಗೆ ಇಲಾಖೆ ತಂಡ ಗುರುವಾರ ಬೆಳಗ್ಗೆ ಜೈಪುರ, ಸವಾರ್ದಾ, ಟೋಂಕ್, ದಿಯೋಲಿ, ಕಿಶನ್‌ಗಢದಲ್ಲಿ ದಾಳಿ ನಡೆಸಿತ್ತು. ಸುಮಾರು 300 ಐಟಿ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಉದ್ಯಮ ಸಂಸ್ಥೆಗಳು ಸ್ಟೋನ್ ವ್ಯಾಪಾರ ನಡೆಸುತ್ತಿದ್ದವು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 2026ರ ವೇಳೆಗೆ ಎಲೆಕ್ಟ್ರಿಕಲ್​ ವೆಹಿಕಲ್​ ಚಾರ್ಜಿಂಗ್​ ವೆಚ್ಚ16 ಬಿಲಿಯನ್​ ಡಾಲರ್ ದಾಟಲಿದೆ: ಅಧ್ಯಯನ


For All Latest Updates

TAGGED:

ABOUT THE AUTHOR

...view details