ಕರ್ನಾಟಕ

karnataka

ETV Bharat / bharat

2 ವರ್ಷದ ಮಗುವಿನ ಮೇಲೆ ಕ್ರಿಮಿನಲ್​ ಕೇಸ್​! ಕೋರ್ಟ್ ಹೇಳಿದ್ದೇನು ಗೊತ್ತೇ? - ಮಗುವಿನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲು

ಪ್ರಕರಣವೊಂದರಲ್ಲಿ ಪೊಲೀಸರು 2 ವರ್ಷದ ಮಗುವಿನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಮಗುವಿನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲು
ಮಗುವಿನ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲು

By

Published : Mar 17, 2023, 2:15 PM IST

ಬೆಗುಸರಾಯ್​ (ಬಿಹಾರ): ಬ್ಯಾರಿಕೇಡ್​ ಮುರಿದ ಪ್ರಕರಣವೊಂದರಲ್ಲಿ ಎರಡು ವರ್ಷದ ಮಗುವಿನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ವಿಚಿತ್ರ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಗುರುವಾರ ತಾಯಿ ತನ್ನ ಮಗುವಿನೊಂದಿಗೆ ಜಾಮೀನಿಗಾಗಿ ಬೇಗುಸರಾಯ್ ನ್ಯಾಯಾಲಯಕ್ಕೆ ಆಗಮಿಸಿದ್ದರು.

ಪ್ರಕರಣದ ವಿವರ: 2021ರಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿ ಅನೇಕ ಸಾವು, ನೋವುಗಳು ಸಂಭವಿಸಿದ್ದವು. ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಗಳಿಗೆ ಸೂಚಿಸಿತ್ತು. ಸರ್ಕಾರದ ಆದೇಶದ ಮೇರೆಗೆ ಜನತಾ ಕರ್ಫ್ಯೂ ಜಾರಿ ಮಾಡಲಾಗಿತ್ತು. ಅನಗತ್ಯವಾಗಿ ಜನರು ಮನೆಯಿಂದ ಹೊರಬರದಂತೆ ಸೂಚಿಸಿ ಪೊಲೀಸರು ಬ್ಯಾರಿಕೇಡ್​ಗಳನ್ನು ಅಳವಡಿಸಿದ್ದರು. ಆದರೆ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ 8 ಜನರು ಹೊರಗಡೆ ಬಂದು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್​ ಮುರಿದಿದ್ದರು. ಇವರೊಂದಿಗೆ 2 ವರ್ಷದ ಮಗು ಕೂಡಾ ಇತ್ತು.

ಬೆಗುಸರಾಯ್​ನ ಮುಫಾಸಿಲ್​ ಪೊಲೀಸ್​ ಠಾಣೆಯಲ್ಲಿ ದಿನಾಂಕ 10 ಏಪ್ರಿಲ್​ 2021ರಲ್ಲಿ ಬ್ಯಾರಿಕೆಡ್​ ಮುರಿದ ಪ್ರಕರಣದಲ್ಲಿ ಮಗು ಸೇರಿ 8 ಜನರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗಿತ್ತು. ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಹೊರಗಡೆ ಬಂದು ಅಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೆಡ್​ಗಳನ್ನು ಮುರಿದಿದ್ದು, ಜನರಲ್ಲಿ ಕೋವಿಡ್ ಸೋಂಕಿನ ಬೆದರಿಕೆ ಹೆಚ್ಚಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದರು.

ಇದನ್ನೂ ಓದಿ:81 ವರ್ಷದ ಅಪರಾಧಿಗೆ ಸಂಬಳವಿಲ್ಲದೆ ಅಂಗನವಾಡಿಯಲ್ಲಿ ಕೆಲಸ ಮಾಡುವ ಶಿಕ್ಷೆ ವಿಧಿಸಿದ ಹೈಕೋರ್ಟ್

ಮಗುವಿಗೆ ಜಾಮೀನು ಕೋರಿ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಿನ್ನೆ ನಡೆಸಿತು. ಪೊಲೀಸರು ಪ್ರಕರಣ ದಾಖಲಿಸಿದಾಗ ಮಗುವಿಗೆ 2 ವರ್ಷ ವಯಸ್ಸಾಗಿತ್ತು. ಪ್ರಸ್ತುತ ನಾಲ್ಕು ವರ್ಷವಾಗಿದೆ ಎಂದು ತಾಯಿ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೇ ಪ್ರಕರಣ ಇತ್ಯರ್ಥ ಪಡಿಸುವಂತೆ ಮಗುವಿನ ಪರ ಸರ್ಕಾರಿ ವಕೀಲ ಪರ ದೇವವ್ರತ್ ಪಟೇಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಚಿಕ್ಕ ವಯಸ್ಸಿನ ಮಗುವಿಗೆ ಜಾಮೀನು ನೀಡಲು ಅವಕಾಶವಿಲ್ಲ, ಜಾಮೀನಿಗೆ ಅರ್ಜಿ ಸಲ್ಲಿಸುವಂತೆಯೂ ಇಲ್ಲ. ಅಲ್ಲದೇ ಕಾನೂನು ಕ್ರಮವನ್ನೂ ಜರುಗಿಸುವಂತಿಲ್ಲ. ಪ್ರಕರಣದಿಂದ ಮಗುವಿನ ಹೆಸರನ್ನು ತೆಗೆದು ಹಾಕುವಂತೆ ಪೊಲೀಸರಿಗೆ ಆದೇಶಿಸಿದೆ.

ಇದನ್ನೂ ಓದಿ:ಟ್ವಿಟರ್ ಖಾತೆಗಳಿಗೆ ನಿರ್ಬಂಧ: ನಿರ್ಧಾರ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

ಪೋಷಕರಿಗೆ ಮಕ್ಕಳನ್ನು ಭೇಟಿ ಮಾಡುವ ಹಕ್ಕು ಕಲ್ಪಿಸುವ ಅಧಿಕಾರ ಮಕ್ಕಳ ಆಯೋಗಕ್ಕಿಲ್ಲ: ಹೈಕೋರ್ಟ್

For All Latest Updates

ABOUT THE AUTHOR

...view details