ಕರ್ನಾಟಕ

karnataka

By

Published : Jun 17, 2022, 5:19 PM IST

ETV Bharat / bharat

ನಾಲ್ಕು ಅಪ್ರಾಪ್ತರು ಸೇರಿ 7 ಜನರಿಂದ ಬಾಲಕಿ ಮೇಲೆ ಅತ್ಯಾಚಾರ : ಹೆಡೆಮುರಿ ಕಟ್ಟಿದ ಪೊಲೀಸರು

ಜೂನ್ 14 ರಂದು ಅಪ್ರಾಪ್ತ ಬಾಲಕ ತನ್ನ ಅಪ್ರಾಪ್ತ ಗೆಳತಿಯನ್ನು ಬಾರಿ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ತನ್ನ ಸ್ನೇಹಿತನ ಮನೆಗೆ ಕರೆಸಿಕೊಂಡಿದ್ದ. ಅಲ್ಲಿ ಏಳು ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು..

ನಾಲ್ಕು ಅಪ್ರಾಪ್ತರು ಸೇರಿದಂತೆ 7 ಜನರಿಂದ ಬಾಲಕಿ ಮೇಲೆ ಅತ್ಯಾಚಾರ: ಹೆಡೆಮುರಿ ಕಟ್ಟಿದ ಪೊಲೀಸರು
ನಾಲ್ಕು ಅಪ್ರಾಪ್ತರು ಸೇರಿದಂತೆ 7 ಜನರಿಂದ ಬಾಲಕಿ ಮೇಲೆ ಅತ್ಯಾಚಾರ: ಹೆಡೆಮುರಿ ಕಟ್ಟಿದ ಪೊಲೀಸರು

ಧೋಲ್‌ಪುರ್(ರಾಜಸ್ಥಾನ) :ರಾಜಸ್ಥಾನದ ಧೋಲ್‌ಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ನಾಲ್ವರು ಅಪ್ರಾಪ್ತರು ಸೇರಿದಂತೆ ಏಳು ಆರೋಪಿಗಳನ್ನು ಬಾರಿ ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ. ಬಾರಿ ಕೊತ್ವಾಲಿ ಪೊಲೀಸರ ಪ್ರಕಾರ, ಅಪ್ರಾಪ್ತ ಬಾಲಕ ತನ್ನ ಅಪ್ರಾಪ್ತ ಗೆಳತಿಯನ್ನು ತನ್ನ ಸ್ನೇಹಿತನ ಮನೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ.

ಇನ್ನು ಏಳು ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಇದರಲ್ಲಿ ಓರ್ವ ಅತ್ಯಾಚಾರದ ವಿಡಿಯೋ ಚಿತ್ರೀಕರಿಸಿದ್ದಾನೆ. ಬಳಿಕ ಅಪ್ರಾಪ್ತೆಗೆ ಕರೆ ಮಾಡಿ ಹಣ ಕೊಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಆಡಿಯೋ ಕ್ಲಿಪ್​ ಪೊಲೀಸರಿಗೆ ಸಿಕ್ಕಿದ್ದು, ಇದನ್ನರಿತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಸಿಂಗ್ ತೋಗಾಸ್ ಮಾತನಾಡಿ, ವಿಡಿಯೋ ವೈರಲ್ ಮಾಡುತ್ತೇನೆಂದು ಬೆದರಿಕೆ ಹಾಕುವ ಆಡಿಯೋ ಕ್ಲಿಪ್ ಪೊಲೀಸರಿಗೆ ಸಿಕ್ಕಿದೆ. ಈ ಆಡಿಯೋ ಕ್ಲಿಪ್ ಸಿಕ್ಕ ನಂತರ ಅಪರಾಧಿಯನ್ನು ಪತ್ತೆ ಹಚ್ಚಲು ತಕ್ಷಣವೇ ಸೈಬರ್ ಸೆಲ್ ಅನ್ನು ಸಂಪರ್ಕಿಸಲಾಯಿತು. ಸೈಬರ್ ಸೆಲ್ ಘಟನೆಯ ಬಗ್ಗೆ ತನಿಖೆ ನಡೆಸಿತು. ಈ ಮೂಲಕ ಸಾಮೂಹಿಕ ಅತ್ಯಾಚಾರದ ಸಂಪೂರ್ಣ ವಿಷಯವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ವಿವರ: ಜೂನ್ 14ರಂದು ಅಪ್ರಾಪ್ತ ಬಾಲಕ ತನ್ನ ಅಪ್ರಾಪ್ತ ಗೆಳತಿಯನ್ನು ಬಾರಿ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ತನ್ನ ಸ್ನೇಹಿತನ ಮನೆಗೆ ಕರೆಸಿಕೊಂಡಿದ್ದ. ಅಲ್ಲಿ ಏಳು ಆರೋಪಿಗಳು ಸರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಈ ಪೈಕಿ ಆರೋಪಿಯೊಬ್ಬ ಈ ಘಟನೆಯ ವಿಡಿಯೋ ಕೂಡ ಮಾಡಿದ್ದ. ಹಾಗೆ 1 ಲಕ್ಷಕ್ಕೆ ಬೇಡಿಕೆ ಸಹ ಇಟ್ಟಿದ್ದ.

ಇನ್ನು ಬಾರಿ ಕೊತ್ವಾಲಿ ಪೊಲೀಸರು ಅಪ್ರಾಪ್ತ ಬಾಲಕಿಯ ಸಂಬಂಧಿಕರನ್ನು ಗುರುತಿಸಿ ಎಫ್‌ಐಆರ್ ದಾಖಲಿಸುವಂತೆ ತಿಳಿಸಿದ್ದಾರೆ. ಪೊಲೀಸರ ಸಲಹೆ ಮೇರೆಗೆ ತ್ವರಿತ ಕ್ರಮಕೈಗೊಂಡು ಅಪ್ರಾಪ್ತ ಬಾಲಕಿಯ ಕುಟುಂಬಸ್ಥರು ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದಾದ ಬಳಿಕ ಪೊಲೀಸ್ ತಂಡ ಆಯಾ ಸ್ಥಳಗಳ ಮೇಲೆ ದಾಳಿ ನಡೆಸಿ ಏಳು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳ ಬಂಧನದ ವೇಳೆ ಅತ್ಯಾಚಾರದ ವಿಡಿಯೋ ಸಹ ಪತ್ತೆಯಾಗಿದೆ.

ಇದನ್ನೂ ಓದಿ:ಮದುವೆ ಆಗಿ ಒಂದೇ ತಿಂಗಳಿಗೆ ನಾಲ್ಕು ತಿಂಗಳ ಗರ್ಭಿಣಿಯಾದ ಯುವತಿ : ನವ ವಿವಾಹಿತನಿಗೆ ಶಾಕ್​

ABOUT THE AUTHOR

...view details