ಕರ್ನಾಟಕ

karnataka

ETV Bharat / bharat

ಪೊಲೀಸರು​-ಮಾವೋವಾದಿಗಳ ಮಧ್ಯೆ ಗುಂಡಿನ ಚಕಮಕಿ... ಮಹಿಳಾ ನಕ್ಸಲ್​ ಸೇರಿ ಇಬ್ಬರು ಸಾವು - ಕೇಷ್ಕಲ್​ನಲ್ಲಿ ಎನ್​ಕೌಂಟರ್​ನಲ್ಲಿ ಮಹಿಳಾ ನಕ್ಸಲ್​ ಜೊತೆ ಇಬ್ಬರು ಸಾವು,

ಛತ್ತೀಸ್​ಗಢ ಗಡಿಯ ಅರಣ್ಯ ಪ್ರದೇಶದಲ್ಲಿ ಪೊಲೀಸರು​ ಮತ್ತು ಮಾವೋವಾದಿಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಮಹಿಳಾ ನಕ್ಸಲ್​ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.

cylinder exploded, cylinder exploded while cooking, cylinder exploded while cooking at home, cylinder exploded while cooking at home in gonda, cylinder exploded news, ಸಿಲಿಂಡರ್​ ಸ್ಫೋಟ, ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್​ ಸ್ಫೋಟ, ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್​ ಸ್ಫೋಟ, ಗೊಂಡಾದಲ್ಲಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಸಿಲಿಂಡರ್​ ಸ್ಫೋಟ, ಸಿಲಿಂಡರ್​ ಸ್ಫೋಟ ಸುದ್ದಿ,
ಮಹಿಳಾ ನಕ್ಸಲ್​ ಸೇರಿ ಇಬ್ಬರು ಸಾವು

By

Published : Jun 2, 2021, 8:02 AM IST

ಕೊಂಡಗಾಂವ್:ಮಂಗಳವಾರ ನಡೆದ ಎನ್​ಕೌಂಟರ್​ನಲ್ಲಿ ಮಹಿಳಾ ನಕ್ಸಲ್​ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಕೇಷ್ಕಲ್​ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕೇಷ್ಕಲ್​ ಅರಣ್ಯ ಪ್ರದೇಶದಲ್ಲಿ ಆ್ಯಂಟಿ ನಕ್ಸಲ್​ ಕಾರ್ಯಾಚರಣೆ ನಡೆಸುತ್ತಿದ್ದ ಯೋಧರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳ ಯೋಧರು ಸಹ ನಕ್ಸಲರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ ಅನೇಕ ನಕ್ಸಲರು ಸಾವನ್ನಪ್ಪಿರುವ ಶಂಕೆಯಿದ್ದು, ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ ಎಂದು ಎಸ್​ಪಿ ಸಿದ್ಧಾರ್ಥ್​ ತಿವಾರಿ ಹೇಳಿದ್ದಾರೆ.

ಮಹಿಳಾ ನಕ್ಸಲ್​ ಸೇರಿ ಇಬ್ಬರು ಸಾವು

ಕೇಷ್ಕಲ್​ನ ಧನೋರಾ ಅರಣ್ಯ ಪ್ರದೇಶದಲ್ಲಿ ಡಿಆರ್‌ಜಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮಹಿಳಾ ನಕ್ಸಲ್​ವೊಬ್ಬರು ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ ಎಂದು ಬಸ್ತರ್​ ಐಜಿ ಖಚಿತಪಡಿಸಿದ್ದಾರೆ.

ಒಂದು ಎಸ್‌ಎಲ್‌ಆರ್ ಗನ್, ಒಂದು 303 ಗನ್, ಎರಡು 12 ಬೋರ್ ಗನ್ ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಮುಂದುವರೆಯುತ್ತಿದೆ ಎಂದು ಬಸ್ತಾರ್ ಐಜಿ ಪಿ.ಸುಂದರರಾಜ್ ತಿಳಿಸಿದ್ದಾರೆ.

ABOUT THE AUTHOR

...view details