ಕರ್ನಾಟಕ

karnataka

ETV Bharat / bharat

ಮೊಸರು ಗಡಿಗೆ ಒಡೆವ ಸ್ಪರ್ಧೆಯಲ್ಲಿ ಅವಘಡ .. 153 ಜನರಿಗೆ ಗಾಯ - ಈಟಿವಿ ಭಾರತ ಕನ್ನಡ ನ್ಯೂಸ್​

ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಸ್ಪರ್ಧೆಯಾದ ದಹಿ ಹಂಡಿ ಒಡೆಯುವ ಸ್ಪರ್ಧೆಯಲ್ಲಿ ನಿರ್ಮಿಸಿದ ಮಾನವ ಪಿರಮಿಡ್​ ಉದುರಿ ಬಿದ್ದು 153 ಜನರು ಗಾಯಗೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

Etv Bharatdahihandi-in-mumbai
ಮೊಸರು ಗಡಿಗೆ ಹೊಡೆವ ಸ್ಪರ್ಧೆಯಲ್ಲಿ ಅವಘಡ

By

Published : Aug 20, 2022, 9:10 AM IST

ಮುಂಬೈ (ಮಹಾರಾಷ್ಟ್ರ):ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ನಿಮಿತ್ತ ಮುಂಬೈನಲ್ಲಿ ನಡೆದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ವೇಳೆ ಆದ ಅವಘಡದಲ್ಲಿ 153 ಜನರು ಗಾಯಗೊಂಡ ಘಟನೆ ನಡೆದಿದೆ. ಇದರಲ್ಲಿ 130 ಜನರು ಚಿಕಿತ್ಸೆ ಪಡೆದು ಬಿಡುಗಡೆಯಾದರೆ, ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಮುಂಬೈನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಇಲ್ಲಿ ದಹಿ ಹಂಡಿ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಬಿಸಿ ರಕ್ತದ ಯುವಕರು ಎತ್ತರದಲ್ಲಿ ಕಟ್ಟಲಾದ ಮೊಸರಿನ ಗಡಿಗೆಯನ್ನು ಒಡೆದು ಸಂಭ್ರಮಿಸುತ್ತಾರೆ. ಅದರಂತೆ ನಿನ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಗಡಿಗೆ ಒಡೆಯುವ ತಂಡ ಭಾರಿ ಎತ್ತರದಲ್ಲಿ ಪಿರಮಿಡ್​ ರಚಿಸಿ ಕಟ್ಟಲಾದ ಗಡಿಗೆ ಒಡೆಯಲು ಯತ್ನಿಸಿದೆ.

ಈ ವೇಳೆ ಆಕಸ್ಮಾತ್​ ಜಾರಿ ಬಿದ್ದು ಇಡೀ ಮಾನವ ಪಿರಮಿಡ್​ ಉದುರಿ ಬಿದ್ದಿದ್ದಾರೆ. ಇದರಿಂದ ಕಳೆಭಾಗದಲ್ಲಿದ್ದ ಜನರು ಉಸಿರುಗಟ್ಟಿದ್ದಲ್ಲದೇ ಅವರ ಮೇಲೆ ಹಲವರು ಬಿದ್ದ ಕಾರಣ ಗಾಯಗೊಂಡಿದ್ದಾರೆ. ತಕ್ಷಣವೇ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರು ಚಿಕಿತ್ಸೆ ಪಡೆದು ಬಿಡುಗಡೆಯಾದರೆ, ತೀವ್ರ ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಓದಿ:ಮಥುರಾ ಕೃಷ್ಣ ದೇಗುಲದಲ್ಲಿ ಮಂಗಳಾರತಿ ವೇಳೆ ನೂಕುನುಗ್ಗಲು.. ಇಬ್ಬರು ಭಕ್ತರ ಸಾವು

ABOUT THE AUTHOR

...view details