ಕಟಕ್:ಇಂಡಿಯಾ ಇನ್ಫೋಲೈನ್ ಫೈನಾನ್ಸ್ ಲಿಮಿಟೆಡ್ ಫೈನಾನ್ಸ್ಗೆ ನುಗ್ಗಿದ ನಾಲ್ಕು ದರೋಡೆಕೋರರು 12 ಕೋಟಿ ಮೊತ್ತದ ನಗದು ಮತ್ತು ಬಂಗಾರ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಗನ್ ತೋರಿಸಿ 12 ಕೋಟಿ ರೂ. ಲೂಟಿ ಮಾಡಿ ಎಸ್ಕೇಪ್ ಆದ ದರೋಡೆಕೋರರು! - ಕಟಕ್ ಐಐಎಫ್ಎಲ್ ಗೋಲ್ಡ್ ಬ್ಯಾಂಕ್ ದರೋಡೆ,
ಬಂಗಾರ ಮತ್ತು ನಗದು ಸೇರಿ ಸುಮಾರು 12 ಕೋಟಿ ರೂ. ಲೂಟಿ ಮಾಡಿದ ನಾಲ್ವರು ದರೋಡೆಕೋರರು ಬಳಿಕ ಪರಾರಿಯಾಗಿರುವ ಘಟನೆ ಒಡಿಶಾದ ಕಟಕ್‌ನಲ್ಲಿ ನಡೆದಿದೆ.
ಕಟಕ್‌ನಲ್ಲಿ ಭಾರಿ ಮೊತ್ತದ ದರೋಡೆಯಾಗಿದೆ. ಇಲ್ಲಿನ ಹೊಸ ರಸ್ತೆಯ ಐಐಎಫ್ಎಲ್ ಫೈನಾನ್ಸ್ನಲ್ಲಿ ಸುಮಾರು 12 ಕೋಟಿ ರೂ.ಗಳನ್ನು ಲೂಟಿ ಮಾಡಲಾಗಿದೆ. ಫೈನಾನ್ಸ್ ಕಂ ಬ್ಯಾಂಕ್ಗೆ ನುಗ್ಗಿದ ನಾಲ್ವರು ದರೋಡೆಕೋರರು ಸಿಬ್ಬಂದಿಗೆ ಗನ್ಪಾಯಿಂಟ್ನಿಂದ ಬೆದರಿಸಿ ಸುಮಾರು 12 ಕೋಟಿ ಬೆಲೆ ಬಾಳುವ ಬಂಗಾರ ಮತ್ತು ನಗದು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ.
ದರೋಡೆಕೋರರು ಪರಾರಿಯಾಗುತ್ತಿದ್ದಂತೆ ಫೈನಾನ್ಸ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.