ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ 12 ಮಂದಿಗೆ ಬ್ಲಾಕ್​ ಫಂಗಸ್​: ಓರ್ವ ಸಾವು, 11 ಮಂದಿ ಗಂಭೀರ

ಕೊರೊನಾ ಅಟ್ಟಹಾಸದ ನಡುವೆ ಒಡಿಶಾದಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು, ಓರ್ವ ಸಾವನ್ನಪ್ಪಿದ್ದಾನೆ. 11 ಮಂದಿಗೆ ಭುವನೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

By

Published : May 22, 2021, 2:55 AM IST

12 black fungus cases detected in Odisha; 1 dead
ಒಡಿಶಾದಲ್ಲಿ 12 ಮಂದಿಗೆ ಬ್ಲಾಕ್​ ಫಂಗಸ್​: ಓರ್ವ ಸಾವು, 11 ಮಂದಿ ಗಂಭೀರ

ಭುವನೇಶ್ವರ, ಒಡಿಶಾ : ಕೋವಿಡ್-19 ಎರಡನೇ ಅಲೆ ದೇಶದಲ್ಲಿ ತೀವ್ರ ಹಾವಳಿ ಸೃಷ್ಟಿಸುತ್ತಿರುವಂತೆಯೇ ಕಾಣಿಸಿಕೊಂಡಿರುವ ಕಪ್ಪು ಶಿಲೀಂಧ್ರ ರೋಗ (ಮ್ಯೂಕರ್​ಮೈಕೋಸಿಸ್​​) ಅನೇಕರನ್ನು ಈಗಾಗಲೇ ಬಲಿ ತೆಗೆದುಕೊಂಡಿದೆ.

ಒಡಿಶಾದಲ್ಲಿ ಇದುವರೆಗೆ 12 ಮಂದಿಯಲ್ಲಿ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿದ್ದು, 12 ಮಂದಿಯಲ್ಲಿ ಓರ್ವ ಸಾವನ್ನಪ್ಪಿದ್ದು, 11 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದನ್ನೂ ಓದಿ:2021ರ ಅಂತ್ಯದ ವೇಳೆ ಬಹುಪಾಲು ವಯಸ್ಕರಿಗೆ ವ್ಯಾಕ್ಸಿನೇಷನ್: ಕೇಂದ್ರ ಆರೋಗ್ಯ ಸಚಿವ

ಒಡಿಶಾ ರಾಜ್ಯದ ವಿವಿಧ ಭಾಗಗಳಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗಿದ್ದರೂ ಕೂಡಾ, ಎಲ್ಲರಿಗೂ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗುರುವಾರವಷ್ಟೇ ಕಪ್ಪು ಶಿಲೀಂಧ್ರ ರೋಗವನ್ನು ಅಧಿಸೂಚಿತ ರೋಗ ಎಂದು ಒಡಿಶಾ ಸರ್ಕಾರ ಘೋಷಣೆ ಮಾಡಿದೆ.

ABOUT THE AUTHOR

...view details