ETV Bharat / snippets

ಉಡುಪಿ: ಪಾರ್ಟ್ ಟೈಮ್ ಜಾಬ್​ ಹೆಸರಿನಲ್ಲಿ ಯುವತಿಗೆ ₹2 ಲಕ್ಷ ವಂಚನೆ

Udupi Nagar Police Station
ಉಡುಪಿ ನಗರ ಪೊಲೀಸ್​ ಠಾಣೆ (ETV Bharat)
author img

By ETV Bharat Karnataka Team

Published : Jul 17, 2024, 2:30 PM IST

ಉಡುಪಿ: ಪಾರ್ಟ್ ಟೈಮ್ ಜಾಬ್​ ಹೆಸರಿನಲ್ಲಿ ಟಾಸ್ಕ್ ನೀಡಿ ಯುವತಿಗೆ ಆನ್‌ಲೈನ್ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶ್ಚಿತಾ (25) ಎಂಬವರಿಗೆ ಸಾಮಾಜಿಕ ಜಾಲತಾಣದಲ್ಲಿ ಪಾರ್ಟ್ ಟೈಮ್ ಜಾಬ್ ಬಗ್ಗೆ ಜಾಹೀರಾತು ಬಂದಿದ್ದು, ಲಿಂಕ್​ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಂಡಿದ್ದರು. ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆಲವೊಂದು ಟಾಸ್ಕ್​ಗಳನ್ನು ನೀಡಿ, ಹೆಚ್ಚು ಹಣ ಪಡೆಯುವ ಬಗ್ಗೆ ನಂಬಿಸಿದ್ದರು. ಅದರಂತೆ ಅವರು ಹಂತ ಹಂತವಾಗಿ ಒಟ್ಟು 2,06,507 ಹಣವನ್ನು ಆನ್​ಲೈನ್​​ ಮೂಲಕ ಅಪರಿಚಿತ ವ್ಯಕ್ತಿಗಳು ತಿಳಿಸಿದ ಖಾತೆಗೆ ವರ್ಗಾಯಿಸಿದ್ದರು. ಬಳಿಕ ಹಣ ನೀಡದೆ ಮೋಸ ಮಾಡಿರುವುದಾಗಿ ಉಡುಪಿ ನಗರ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸೀಟು ಕೊಡಿಸುವುದಾಗಿ ವಂಚನೆ ಘೋರ ಕೃತ್ಯ, ಸಂಪೂರ್ಣ ನಿಯಂತ್ರಣ ಅಗತ್ಯ: ಹೈಕೋರ್ಟ್ - MEDICAL SEAT FRAUD CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.