ETV Bharat / snippets

ಅಥಣಿ: ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಿಸಿದ ಯುವಕ

young man rescued woman
ಮಹಿಳೆ ರಕ್ಷಿಸಿದ ಯುವಕ (ETV Bharat)
author img

By ETV Bharat Karnataka Team

Published : Sep 22, 2024, 3:31 PM IST

ಚಿಕ್ಕೋಡಿ (ಬೆಳಗಾವಿ): ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಯುವಕನೋರ್ವ ಸಮಯಪ್ರಜ್ಞೆ ಮೆರೆದು ರಕ್ಷಿಸಿರುವ ಘಟನೆ ನಡೆದಿದೆ. ಅಥಣಿ ತಾಲೂಕಿನ ಹಲ್ಯಾಳ ದರೂರು ಬ್ಯಾರೇಜ್ ಬಳಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು.

ಈ ವೇಳೆ ಶೇಗುಣಸಿ ಗ್ರಾಮದ ಯುವಕ ಪ್ರಶಾಂತ್ ಸಿದ್ದಪ್ಪ ಗಸ್ತಿ ಮಹಿಳೆಯನ್ನು ಗಮನಿಸಿ, ನೀರಿಗೆ ಜಿಗಿದು ರಕ್ಷಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಮಹಿಳೆಯನ್ನು ಮೇಲೆತ್ತಲಾಗಿದೆ. ಪೊಲೀಸರು ಮಹಿಳೆಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.

ಯುವಕ ಪ್ರಶಾಂತ ಗಸ್ತಿ 'ಈಟಿವಿ ಭಾರತ' ಜೊತೆ ದೂರವಾಣಿ ಮೂಲಕ ಮಾತನಾಡಿ, ''ನಾವು ಎಂದಿನಂತೆ ಅಥಣಿ ಪಟ್ಟಣಕ್ಕೆ ಕೆಲಸಕ್ಕೆ ಬರುತ್ತಿದ್ದೆವು. ದರೂರು ಬ್ಯಾರೇಜ್ ಮೇಲೆ ಜನಜಂಗುಳಿಯಿಂದ ಏನೋ ವೀಕ್ಷಣೆ ಮಾಡುತ್ತಿದ್ದರು. ಮೊಸಳೆ ಬಂದಿರಬಹುದು, ಅದನ್ನು ಎಲ್ಲರೂ ನೋಡುತ್ತಿದ್ದಾರೆಂದು ಬೈಕ್​ ನಿಲ್ಲಿಸಿದೆವು. ಅಲ್ಲಿಗೆ ತೆರಳಿ ನೋಡುತ್ತಿದ್ದಂತೆ, ಮಹಿಳೆ ನೀರಿನಲ್ಲಿ ಒದ್ದಾಡುತ್ತಿದ್ದರು. ನಾನು ತಕ್ಷಣ ನೀರಿಗೆ ಜಿಗಿದು ರಕ್ಷಣೆಗೆ ಮುಂದಾದೆ. ಬ್ಯಾರೇಜಿನ ರಾಡ್​ಗೆ ಸೀರೆ ಸಿಲುಕಿದ್ದರಿಂದ ಮಹಿಳೆ ನೀರಿನಲ್ಲಿ ತೇಲುತ್ತಿದ್ದರು. ಅವರ ಪ್ರಾಣ ಉಳಿದಿದೆ, ದೇವರು ದೊಡ್ಡವನು'' ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.