ಶಿವಮೊಗ್ಗ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಲ್ಯಾಣಿಗೆ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಶಿಕಾರಿಪುರ ತಾಲೂಕಿನಲ್ಲಿನ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯಲ್ಲಿ ಭಾನುವಾರ ಘಟನೆ ನಡೆದಿದೆ.
ತಾಹೀರ್ (21) ಸೆಲ್ಫಿ ಕ್ರೇಜಿಗೆ ಬಲಿಯಾದ ಯುವಕ. ಈತ ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ಗಂಡಗದಕೇರಿ ನಿವಾಸಿ. ಯುವಕ ತನ್ನ ಸ್ನೇಹಿತರ ಜೊತೆ ಉಡುತಡಿಗೆ ಹೋಗಿದ್ದ. ಅಲ್ಲಿನ ಪ್ರವಾಸಿ ತಾಣದ ಕಲ್ಯಾಣಿ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ಬಳಿಕ ಆತ ಕಲ್ಯಾಣಿಯಿಂದ ಮೇಲೇಳಲೇ ಇಲ್ಲ. ತಕ್ಷಣ ಸ್ನೇಹಿತರು ತಾಹೀರ್ನನ್ನು ಮೇಲಕ್ಕೆತ್ತಲು ಯತ್ನಿಸುವಷ್ಟರಲ್ಲೇ ತಾಹೀರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಆತ್ಮಹತ್ಯೆಗೆ ಶರಣಾದ ಮಗನ ಮೃತದೇಹದ ಮುಂದೆಯೇ ಪ್ರಾಣಬಿಟ್ಟ ತಾಯಿ - Mother Son Die