ಚಾಮರಾಜನಗರ: ಕಣ್ಣು ಕಾಣದ ಕಾಡಾನೆಯೊಂದು ಕಂದಕಕ್ಕೆ ಬಿದ್ದು ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಓಂಕಾರ ಅರಣ್ಯ ವಲಯದ ಹೊಸಪುರ ಸಮೀಪದ ಮಲ್ಲಹಳ್ಳಿಯ ದನದಾರಿಯಲ್ಲಿ ನಡೆದಿದೆ. ಮೃತಪಟ್ಟ ಗಂಡಾನೆಗೆ ಅಂದಾಜು 45ರಿಂದ 55 ವರ್ಷ ಪ್ರಾಯವಿರಬಹುದು ಎಂದು ಅಂದಾಜಿಸಲಾಗಿದೆ.
ರೈತರು ಜಮೀನುಗಳಿಗೆ ತೆರಳುವಾಗ ಕಂದಕದಲ್ಲಿ ಬಿದ್ದ ಆನೆಯ ಪ್ರಕರಣ ಬೆಳಕಿಗೆ ಬಂದಿದೆ. ಆನೆಯ ಒಂದು ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೋಗಿದ್ದು, ಮತ್ತೊಂದು ಕಣ್ಣು ಕೂಡ ಪೊರೆಗೆ ತುತ್ತಾಗಿ ದೃಷ್ಟಿಹೀನವಾಗಿತ್ತು.
ಕಂದಕಕ್ಕೆ ಬಿದ್ದ ಆನೆ ಉಸಿರಾಟದ ಸಮಸ್ಯೆಗೆ ತುತ್ತಾಗಿ ಬಳಿಕ ಹೃದಯಾಘಾತಕ್ಕೊಳಗಾಗಿದೆ. ಕರುಳು ಸಂಬಂಧಿ ಕಾಯಿಲೆಯಿಂದಲೂ ನರಳುತ್ತಿತ್ತು ಎಂದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬಂದಿದೆ ಎಂದು ಬಂಡೀಪುರ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ರೈಲ್ವೆ ಬ್ಯಾರಿಕೇಡ್ನಲ್ಲಿ ಸಿಲುಕಿದ ಸಲಗ: ಒದ್ದಾಡುತ್ತಿದ್ದ ಆನೆ ಕೊನೆಗೂ ಬಚಾವ್- ವಿಡಿಯೋ - elephant rescue