ಚಾಮರಾಜನಗರ: ಒಂದೇ ದಿನ ಮೂರು ದೇಗುಲಗಳಿಗೆ ಕಳ್ಳರು ಕನ್ನ ಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ತೆಳ್ಳನೂರು, ಯಳಂದೂರು ತಾಲೂಕಿನ ಹೊನ್ನೂರಿನ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಭಕ್ತರು ಅರ್ಪಿಸಿದ್ದ ಕಾಣಿಕೆ ಹಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ತೆಳ್ಳನೂರಿನ ಸಿದ್ದಪ್ಪಾಜಿ ದೇವಾಲಯ ಹಾಗೂ ಕಾಳಿಕಾ ದೇವಾಲಯದಲ್ಲಿ ಬೀಗ ಮುರಿದು ಒಳನುಗ್ಗಿರುವ ಖದೀಮರು ಹುಂಡಿ ಒಡೆದು ಕದ್ದಿದ್ದಾರೆ. ಹುಂಡಿಯಲ್ಲಿ ಲಕ್ಷಗಟ್ಟಲೇ ಹಣ ಸಂಗ್ರವಾಗಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲೂ ಕಳ್ಳರು ಕೈ ಚಳಕ ತೋರಿದ್ದು, ಹೊನ್ನೂರಿನ ರಾಕ್ಷಸಮ್ಮನ ದೇವಾಲಯದಲ್ಲಿ ಕಳವು ನಡೆದಿದೆ. ಬಾಗಿಲನ್ನು ಮೀಟಿ ಒಳನುಗ್ಗಿರುವ ಕಳ್ಳರು ಹಣ ತೆಗೆದುಕೊಂಡು, ಹುಂಡಿಯನ್ನು ದೇವಾಲಯದ ಹೊರಗೆ ಬಿಸಾಡಿ ಹೋಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.