ETV Bharat / snippets

ಕೊನೆಗೂ ಬೋನಿಗೆ ಬಿತ್ತು ಚಿರತೆ; 15 ದಿನಗಳ ಆಪರೇಷನ್ ಅಂತ್ಯ

author img

By ETV Bharat Karnataka Team

Published : Jun 21, 2024, 6:50 PM IST

radio-collared-leopard
ಬೋನಿಗೆ ಬಿದ್ದ ಚಿರತೆ (ETV Bharat)

ಚಾಮರಾಜನಗರ: ಕಳೆದ 15 ದಿನಗಳಿಂದ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಶ್ರಮ ಕೊನೆಗೂ ಫಲ ಕೊಟ್ಟಿದೆ. ರೇಡಿಯೋ ಕಾಲರ್ ಅಳವಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ.

ಕೊಳ್ಳೇಗಾಲ ತಾಲೂಕಿನ ಬಿಆರ್​ಟಿ ವ್ಯಾಪ್ತಿಗೆ ಒಳಪಡುವ ಗುಂಡಾಲ್ ಜಲಾಶಯದ ಸಮೀಪ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಮೈಸೂರು ಚಿರತೆ ಕಾರ್ಯಪಡೆಗೆ ಚಿರತೆಯನ್ನು ಹಸ್ತಾಂತರಿಸಲಾಗಿದೆ.

ಕಳೆದ ತಿಂಗಳು ರೇಡಿಯೋ ಕಾಲರ್ ಅಳವಡಿಸಿರುವ ಈ ಚಿರತೆ ರೈತರ ಜಮೀನುಗಳ ಮೇಲೆ ದಾಳಿ ಮಾಡಿ, ಮೇಕೆ ಮತ್ತು ಕೋಳಿಗಳನ್ನು ತಿಂದು ಹಾಕಿತ್ತು.

ನಂತರ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ 5 ಫೈಬರ್ ಬೋನ್, 2 ತುಮಕೂರು ಕೇಜ್, 35 ಕ್ಯಾಮರಾ ಅಳವಡಿಸಿ, 50ಕ್ಕೂ ಅಧಿಕ ಸಿಬ್ಬಂದಿ ಕಳೆದ 15 ದಿನಗಳಿಂದ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದರು.

ಇದನ್ನೂ ಓದಿ: ನಾಯಿ ಬೇಟೆಯಾಡಲು ಬಂದು ಸೆರೆಯಾದ ಚಿರತೆ! - Leopard Capture In Hassan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.