ETV Bharat / snippets

ರಾಯಚೂರು: ದೋಷಪೂರಿತ ಆಹಾರ ಸೇವಿಸಿ 9 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

LINGASUGUR FOOD POISON
ಲಿಂಗಸೂಗೂರು ತಾಲೂಕು ಆಸ್ಪತ್ರೆ (ETV Bharat)
author img

By ETV Bharat Karnataka Team

Published : Oct 10, 2024, 6:29 PM IST

ರಾಯಚೂರು: ದೋಷಪೂರಿತ ಆಹಾರ ಸೇವನೆಯಿಂದ 9 ಮಂದಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪರಾಂಪುರ ತಾಂಡ‌ಬಳಿಯ ಗದ್ದನಗೇರಿ ತಾಂಡದಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ತಾಂಡದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಈ ವೇಳೆ ದೋಷಪೂರಿತ ಆಹಾರ ಸೇವಿಸಿದವರಲ್ಲಿ ಒಂಬತ್ತು ಜನರಿಗೆ ವಾಂತಿ-ಭೇದಿಯಾಗಿದೆ. ಅಸ್ವಸ್ಥರನ್ನು ಕೂಡಲೇ ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದರಲ್ಲಿ ಮಕ್ಕಳೂ ಸಹ ಇದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ‌ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ದೂರವಾಣಿ ಮೂಲಕ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕೇಕ್ ತಿಂದು 5 ವರ್ಷದ ಮಗು ಸಾವು ಶಂಕೆ; ಪೋಷಕರು ಅಸ್ವಸ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.