ETV Bharat / snippets

ತುಮಕೂರು: ಒಂದು ಕೋಟಿ ರೂ. ಮೌಲ್ಯದ ರಕ್ತಚಂದನ ವಶ

author img

By ETV Bharat Karnataka Team

Published : Jul 23, 2024, 1:34 PM IST

one crore Rs worth Red Sandal seized in Tumakur
ತುಮಕೂರು: ಒಂದು ಕೋಟಿ ರೂ. ಮೌಲ್ಯದ ರಕ್ತಚಂದನ ವಶ (ETV Bharat)

ತುಮಕೂರು: ಒಂದು ಕೋಟಿ ರೂ. ಮೌಲ್ಯದ ರಕ್ತಚಂದನವನ್ನು ಆಂಧ್ರದಿಂದ ತುಮಕೂರಿಗೆ ಸಾಗಿಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಇಂದು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ. ವಾಹನ ಚಾಲಕನನ್ನು ಸೆರೆ ಹಿಡಿದಿದ್ದು, ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ.

ತುಮಕೂರಿನ ಹಿರೇಹಳ್ಳಿ ಇಂಡಸ್ಟ್ರಿಯಲ್ ಏರಿಯಾ ಬಳಿ ಅರಣ್ಯ ಇಲಾಖೆ ತಪಾಸಣೆ ವೇಳೆ, ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡೊಡನೆ ಆರೋಪಿಗಳು ವಾಹನವನ್ನು ವೇಗವಾಗಿ ಚಲಾಯಿಸಿದ್ದಾರೆ. ಆಗ ಬೆನ್ನಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ ಕೆ.ಎ.45 -6234 ನಂಬರ್​ನ ವಾಹನವನ್ನು ಅಡ್ಡಗಟ್ಟಿದ್ದು, ತಪಾಸಣೆಗೆ ಮುಂದಾದಾಗ ಚಾಲಕ ಸೇರಿ ಇಬ್ಬರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಚರಂಡಿಯಲ್ಲಿ ಅವಿತು ಕುಳಿತಿದ್ದ ಚಾಲಕ ಇಬ್ರಾಹಿಂನನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೇಶವಮೂರ್ತಿ ಸೆರೆ ಹಿಡಿದಿದ್ದು, ಪರಾರಿಯಾಗಿರುವ ಮತ್ತೊಬ್ಬ ವ್ಯಕ್ತಿಗಾಗಿ ಹುಡುಕಾಟ ಮುಂದುವರಿದಿದೆ. ಸ್ಥಳಕ್ಕೆ ಆಗಮಿಸಿದ ಎಸಿಎಫ್ ಮಹೇಶ್ ಮಾಲಗತ್ತಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ, ಖರೀದಿ: ಪೊಲೀಸರಿಂದ 13 ಜನರ ಬಂಧನ - 13 people arrested

ETV Bharat Logo

Copyright © 2024 Ushodaya Enterprises Pvt. Ltd., All Rights Reserved.