ETV Bharat / snippets

ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆಗಾಗಿ MRPL ನಿಂದ ₹1 ಕೋಟಿ ದೇಣಿಗೆ

author img

By ETV Bharat Karnataka Team

Published : Jun 25, 2024, 6:15 PM IST

ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆಗಾಗಿ MRPL ನಿಂದ 1 ಕೋಟಿ ದೇಣಿಗೆ
ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆಗಾಗಿ MRPL ನಿಂದ 1 ಕೋಟಿ ದೇಣಿಗೆ (ETV Bharat)

ಮಂಗಳೂರು: ಆರೋಗ್ಯ ಸಂರಕ್ಷಣಾ ಉಪಕ್ರಮದ ಭಾಗವಾಗಿ ಎಂಡೋಸಲ್ಫಾನ್ ಸಂತ್ರಸ್ತರ ಅನುಕೂಲಕ್ಕಾಗಿ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಹೊಸ ಪಾಲನ ಕೇಂದ್ರ (ಡೇ ಕೇರ್ ಸೆಂಟರ್) ನಿರ್ಮಾಣಕ್ಕಾಗಿ ಸಿಎಸ್ಆರ್ ಕಾರ್ಯಕ್ರಮದಡಿಯಲ್ಲಿ MRPL ಸಂಸ್ಥೆ 1 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ.

ದಕ್ಷಿಣ ಕನ್ನಡ ಡಿಸಿ ಮುಲ್ಲೈ ಮುಗಿಲನ್ ಉಪಸ್ಥಿತಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ ಅವರಿಗೆ 1 ಕೋಟಿ ರೂ. ಚೆಕ್ ಅನ್ನು MRPL ಹಿರಿಯ ಅಧಿಕಾರಿಗಳಾದ ಜಿಜಿಎಂ ಹೆಚ್ಆರ್ ಕೃಷ್ಣ ಹೆಗಡೆ ಎಂ., ಸಿಜಿಎಂ ಮನೋಜ್ ಕುಮಾರ್ ಎ ಹಸ್ತಾಂತರಿಸಿದರು. ಇದು ಸ್ಥಳೀಯ 1573 ಎಂಡೋಸಲ್ಫಾನ್ ಸಂತ್ರಸತರಿಗೆ ಅನುಕೂಲವಾಗಲಿದೆ.

ಪ್ರಸ್ತುತ ಕೇಂದ್ರವು ಬಾಡಿಗೆ ಕಟ್ಟಡದಲ್ಲಿದೆ. ಇನ್ನು ಫಿಸಿಯೋಥೆರಪಿ ಉಪಕರಣ ಸಹಿತ ಶಾಶ್ವತ ಕಟ್ಟಡಕ್ಕಾಗಿ ಹಣ ಉಪಯೋಗವಾಗಲಿದೆ. ಸಂತ್ರಸ್ತರ ಜೀವನದ ಗುಣಮಟ್ಟವನ್ನು ಸುಧಾರಿಸಲು ಪೀಡಿತ ವ್ಯಕ್ತಿಗಳಿಗೆ ವಿಶೇಷ ಚಿಕಿತ್ಸಾಲಯಗಳು ಮತ್ತು ಚಿಕಿತ್ಸೆಯನ್ನು ಒದಗಿಸಲು ಇದು ಆರೋಗ್ಯ ಇಲಾಖೆಗೆ ಸಹಾಯ ಮಾಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.