ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅ. 20 ರಂದು ರಾತ್ರಿ 9.33ರ ಸುಮಾರಿಗೆ ಹುಸಿ ಬಾಂಬ್ ಬೆದರಿಕೆ ಇ - ಮೇಲ್ ಬಂದಿದೆ. ನಿಲ್ದಾಣದ ನಿರ್ದೇಶಕ ರೂಪೇಶ್ ಕುಮಾರ್ ಅವರು ಇದೀಗ ನ್ಯಾಯಾಲಯದ ಅನುಮತಿ ಪಡೆದು ಗೋಕುಲ್ ರೋಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅನಾಮಧೇಯ ಇ - ಮೇಲ್‌ನಲ್ಲಿ "ಪೋರ್ಟ್ಸ್ ಇನ್ ಕರ್ನಾಟಕ ಟು ಎಕ್ಸ್ಪೀರಿಯನ್ಸ್ ಇಂಪ್ರೊವೈಲ್ಡ್ ಇಡಿಆರ್‌ಇನ್ ಹಾವರ್ಸ್, ಇವಾಕ್ಯೂಯೇಟ್ ಆಲ್ ಬೈ 4 ಎಎಂ" ಎಂಬ ಭಯವುಂಟು ಮಾಡುವ ಸಂದೇಶವಿತ್ತು. "ವಿಮಾನ ನಿಲ್ದಾಣ ಸ್ಫೋಟಗೊಳ್ಳಲಿದೆ. ಮುಂಜಾನೆ 4 ಗಂಟೆಯೊಳಗೆ ಖಾಲಿ ಮಾಡಿ" ಎಂಬ ಸಂದೇಶ ಕಳುಹಿಸಿದ್ದರು. ಕೂಡಲೇ ಸಿಎಎಸ್‌ಒ, ಐಬಿ, ಬಿಡಿಡಿಎಸ್ ಮತ್ತು ಏರ್‌ಪೋರ್ಟ್ ಸ್ಪೆಷಲ್ ಸೆಕ್ಯೂರಿಟಿ ಕಮಿಟಿ ಮೀಟಿಂಗ್‌ನಲ್ಲಿ ವಿಷಯ ತಿಳಿಸಲಾಗಿತ್ತು. ತಕ್ಷಣವೇ ತಂಡ ಕಾರ್ಯಪ್ರವೃತ್ತವಾಗಿತ್ತು.
ಇದನ್ನೂ ಓದಿ: ಮತ್ತೆ 70 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ: 11 ದಿನದಲ್ಲಿ 250 ವಿಮಾನಗಳಿಗೆ 'ಹುಸಿ' ಕಾಟ