ETV Bharat / snippets

ಪಿಡಬ್ಲ್ಯುಡಿ ಗುತ್ತಿಗೆದಾರರ ಮನೆಗೆ ನುಗ್ಗಿದ ಡಕಾಯಿತಿ ಗ್ಯಾಂಗ್: ಮನೆಯವರನ್ನು ಕಟ್ಟಿ ಹಾಕಿ ಚಿನ್ನಾಭರಣ, ದರೋಡೆ

author img

By ETV Bharat Karnataka Team

Published : Jun 22, 2024, 11:11 AM IST

obbery of gold jewellery money  Robbery case  Gang of dacoits  Dakshina Kannada
ಪಿಡಬ್ಲ್ಯುಡಿ ಗುತ್ತಿಗೆದಾರರ ಮನೆಗೆ ನುಗ್ಗಿದ ಡಕಾಯಿತಿ ಗ್ಯಾಂಗ್: ಮನೆಯವರನ್ನು ಕಟ್ಟಿ ಹಾಕಿ ಚಿನ್ನಾಭರಣ, ದರೋಡೆ (Etv Bharat)

ಮಂಗಳೂರು: ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಎಂಬಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರ ಮನೆಗೆ ನುಗ್ಗಿದ ಡಕಾಯಿತಿ ತಂಡ ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ಚಿನ್ನಾಭರಣ, ನಗದು ದರೋಡೆ ನಡೆಸಿದೆ.

ಪಿಡಬ್ಲ್ಯುಡಿ ಗುತ್ತಿಗೆದಾರ ಉಳಾಯಿಬೆಟ್ಟುವಿನ ಪದ್ಮನಾಭ ಕೋಟ್ಯಾನ್ ಅವರ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿದೆ‌. ಮುಖಕ್ಕೆ ಮಾಸ್ಕ್ ಧರಿಸಿದ್ದ 8 ರಿಂದ 9 ಮಂದಿಯಿದ್ದ ತಂಡ ಶುಕ್ರವಾರ ರಾತ್ರಿ 8ಗಂಟೆಗೆ ಮನೆಗೆ ನುಗ್ಗಿ, ಮನೆಯವರಿಗೆ ಚೂರಿ ತೋರಿಸಿ ಬೆದರಿಸಿದೆ‌. ಬಳಿಕ ಮನೆಯವರನ್ನೆಲ್ಲಾ ಬೆಡ್‌ಶೀಟ್​ನಲ್ಲಿ ಕಟ್ಟಿಹಾಕಿದೆ. ಈ ವೇಳೆ ಪದ್ಮನಾಭ ಕೋಟ್ಯಾನ್ ಅವರ ಬಲಗೈಗೆ ಚೂರಿಯಿಂದ ಇರಿಯಲಾಗಿದೆ.

ದರೋಡೆಕೋರ ತಂಡ ಕೈಗೆ ಸಿಕ್ಕಿದ ಹಣ, ಒಡವೆಗಳನ್ನು ದೋಚಿ ಅಲ್ಲಿಂದ ಕಾಲ್ಕಿತ್ತಿದೆ‌. ಹೋಗುವಾಗ ಮನೆಯ ಮಾಲೀಕನ ವಾಹನವನ್ನು ತೆಗೆದುಕೊಂಡು ಹೋಗಿದೆ. ಆದರೆ, ಮನೆಯಿಂದ ಸ್ವಲ್ಪ ದೂರದಲ್ಲಿ ವಾಹನವನ್ನು ಬಿಟ್ಟು ತಂಡ ಪರಾರಿಯಾಗಿದೆ‌. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.