ETV Bharat / snippets

ಪೊಲೀಸರ ಕುರಿತು ಅವಹೇಳನಕಾರಿ ಫೋಟೋ ಪ್ರಕಟಿಸಿದ್ದ ಟ್ಯಾಟೂ ಕಲಾವಿದನ ವಿರುದ್ಧ ಎಫ್ಐಆರ್

author img

By ETV Bharat Karnataka Team

Published : Jul 20, 2024, 4:43 PM IST

ಟ್ಯಾಟೂ ಕಲಾವಿದನ ವಿರುದ್ಧ ಎಫ್ಐಆರ್
ಟ್ಯಾಟೂ ಕಲಾವಿದನ ವಿರುದ್ಧ ಎಫ್ಐಆರ್ (ETV Bharat)

ಬೆಂಗಳೂರು: ಪೊಲೀಸರ ಕುರಿತು ಅವಹೇಳನಕಾರಿ ಬರಹವಿದ್ದ ಟ್ಯಾಟೂ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಟ್ಯಾಟೂ ಕಲಾವಿದನ ವಿರುದ್ಧ ಪ್ರಕರಣ ದಾಖಲಾಗಿದೆ. ಟ್ಯಾಟೂ ಕಲಾವಿದ ರಿತೇಶ್ ಅಘಾರಿಯಾ ಎಂಬಾತನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಬ್ಬನ್ ಪಾರ್ಕ್ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ಟ್ಯಾಟೂ ಸ್ಟುಡಿಯೋ ನಡೆಸುತ್ತಿದ್ದ ಆರೋಪಿ, ತನ್ನ ಗ್ರಾಹಕರೊಬ್ಬರ ಎದೆಯ ಮೇಲೆ ಪೊಲೀಸರನ್ನ ಅವಹೇಳನ ಮಾಡುವ ರೀತಿಯ ಬರಹದ ಟ್ಯಾಟೂ ಬಿಡಿಸಿದ್ದ.ಅದೇ ಫೋಟೋವನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಆರೋಪಿ ಹಂಚಿಕೊಂಡಿದ್ದ ಫೋಟೋವನ್ನ ಬೆಂಗಳೂರು ಪೊಲೀಸ್ ಅಧಿಕೃತ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದ ವ್ಯಕ್ತಿಯೊಬ್ಬರು, ಗಮನಿಸುವಂತೆ ಸೂಚಿಸಿದ್ದರು.

ಅದರನ್ವಯ ಆರೋಪಿಯ ಕುರಿತು ಮಾಹಿತಿ ಕಲೆಹಾಕಿದ್ದ ಪೊಲೀಸರು ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 352ರ ಅಡಿ ಪ್ರಕರಣ ದಾಖಲಿಸಿಕೊಂಡು ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಜಮೀನಿನಲ್ಲಿ ಕೆಲಸದ ವಿಚಾರಕ್ಕೆ ತಂದೆ ಕೊಲೆಗೈದು ಪರಾರಿಯಾಗಿದ್ದ ಮಗ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.