ETV Bharat / snippets

ಓವರ್‌ಟೇಕ್ ವಿಚಾರಕ್ಕೆ ಜಗಳ, ಕೆಎಸ್​ಆರ್​ಟಿಸಿ ಚಾಲಕನಿಗೆ ಚಾಕು ಇರಿತ

FIGHT BETWEEN DRIVERS  KSRTC BUS DRIVER  DRIVER STABBED  BENGALURU
ಓವರ್ ಟೇಕ್ ವಿಚಾರಕ್ಕೆ ಚಾಲಕರ ನಡುವೆ ಜಗಳ (ETV Bharat)
author img

By ETV Bharat Karnataka Team

Published : May 24, 2024, 2:13 PM IST

ನೆಲಮಂಗಲ: ಓವರ್‌ಟೇಕ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಚಾಲಕರ ನಡುವೆ ಜಗಳ ನಡೆದಿದ್ದು, ಇಬ್ಬರ ಜಗಳ ಕೈಮೀರಿ ಕೆಎಸ್​ಆರ್​ಟಿಸಿ ಚಾಲಕನಿಗೆ ಚಾಕುವಿನಿಂದ ಇರಿಯಲಾಗಿದೆ. ಚಾಕು ಇರಿತಕ್ಕೆ ಒಳಗಾದ ಚಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ನೆಲಮಂಗಲ ತಾಲೂಕು ದಾಬಸ್ ಪೇಟೆಯ ಫ್ಲೈ ಓವರ್ ಮೇಲೆ ಇಂದು ಮುಂಜಾನೆ 4 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಈ ಜಗಳದಲ್ಲಿ ಶಿವಪ್ಪ ಮಡಿವಾಳ ಎಂಬ ಕೆಎಸ್​ಆರ್​ಟಿಸಿ ಡ್ರೈವರ್​ಗೆ ಚಾಕು ಇರಿತವಾಗಿದೆ. ಕ್ಯಾಂಟರ್ ಚಾಲಕ ಭಾಸ್ಕರ್ ರೆಡ್ಡಿ ಎಂಬಾತನಿಂದ ಕೃತ್ಯ ನಡೆದಿದ್ದು, ಆರೋಪಿಯನ್ನು ದಾಬಸ್ ಪೇಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್ ಮತ್ತು ಕ್ಯಾಂಟರ್ ಚಾಲಕರ ನಡುವೆ ಓವರ್ ಟೇಕ್ ವಿಚಾರಕ್ಕೆ ಜಗಳವಾಗಿದೆ. ಈ ವೇಳೆ ಚಾಕು ಇರಿತವಾಗಿದ್ದು, ಚಾಕು ಇರಿತಕ್ಕೆ ಒಳಗಾದ ಶಿವಪ್ಪ ಮಡಿಮಾಳರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.