ETV Bharat / snippets

ಶಿವಮೊಗ್ಗ: ಅಪ್ರಾಪ್ತ ಮಗನಿಗೆ ಬೈಕ್​ ನೀಡಿದ್ದ ತಂದೆಗೆ ₹25 ಸಾವಿರ ದಂಡ

author img

By ETV Bharat Karnataka Team

Published : Jun 22, 2024, 4:49 PM IST

ಅಪ್ರಾಪ್ತ ಮಗನಿಗೆ ಬೈಕ್​ ನೀಡಿದ್ದ ತಂದೆಗೆ ₹25 ಸಾವಿರ ದಂಡ
ಅಪ್ರಾಪ್ತ ಮಗನಿಗೆ ಬೈಕ್​ ನೀಡಿದ್ದ ತಂದೆಗೆ ₹25 ಸಾವಿರ ದಂಡ (ETV Bharat)

ಶಿವಮೊಗ್ಗ: ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಓಡಿಸಲು ಅವಕಾಶ ಮಾಡಿಕೊಟ್ಟ ತಂದೆಗೆ ತೀರ್ಥಹಳ್ಳಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ಜೂನ್ 19 ರಂದು ತೀರ್ಥಹಳ್ಳಿ ಪಟ್ಟಣದ ದೊಡ್ಮನೆ ಕೇರಿಯ ಬಳಿ ತೀರ್ಥಹಳ್ಳಿ ಪೊಲೀಸರು ಬೈಕ್​ಗಳ ತಪಾಸಣೆ ಮಾಡುವ ವೇಳೆ 17 ವರ್ಷದ ಅಪ್ರಾಪ್ತ ಬಾಲಕನೂರ್ವ ಬೈಕ್ ಚಲಾಯಿಸುತ್ತಿದ್ದ. ಈ ಸಂಬಂಧ ಪೊಲೀಸರು, ಬೈಕ್ ಮಾಲೀಕರಾದ ಅಪ್ರಾಪ್ತ ಬಾಲಕನ ತಂದೆ ಮೊಹಮ್ಮದ್ ಹಯಾನ್ ವಿರುದ್ಧ ತೀರ್ಥಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಬಳಿಕ ಪೊಲೀಸರು ತೀರ್ಥಹಳ್ಳಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಕುರಿತು ಜೂನ್ 21 ರಂದು ವಿಚಾರಣೆ ನಡೆಸಿದ ತೀರ್ಥಹಳ್ಳಿಯ ಪಿಸಿಜೆ ಮತ್ತು ಜೆಎಂಎಫ್​ಸಿ ನ್ಯಾಯಾಧೀಶರು ದ್ವಿಚಕ್ರ ವಾಹನದ ಮಾಲೀಕರಾದ ಬಾಲಕನ ತಂದೆಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಕೌಟುಂಬಿಕ ಕಲಹ, ತಂದೆಯನ್ನೇ ಭೀಕರವಾಗಿ ಕೊಂದ ಅಪ್ರಾಪ್ತ ಮಗ - SON KILLS FATHER

ETV Bharat Logo

Copyright © 2024 Ushodaya Enterprises Pvt. Ltd., All Rights Reserved.