ETV Bharat / snippets

ಚಾಮರಾಜನಗರ: ಬಂಡೀಪುರ ಸಫಾರಿಯಲ್ಲಿ ಕ್ರಿಕೆಟಿಗ ಕುಂಬ್ಳೆಗೆ ಹುಲಿ ದರ್ಶನ

ANIL KUMBLE SAFARI
ಕುಟುಂಬ ಸಹಿತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ (ETV Bharat)
author img

By ETV Bharat Karnataka Team

Published : Aug 28, 2024, 9:28 PM IST

ಚಾಮರಾಜನಗರ: ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಖ್ಯಾತ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಕುಟುಂಬ ಸಮೇತ ಭೇಟಿ ಕೊಟ್ಟಿದ್ದರು. ಬುಧವಾರ ಸಂಜೆ ಸಫಾರಿ ನಡೆಸಿರುವ ಕುಂಬ್ಳೆ, ಬಂಡೀಪುರದ ಕಾನನವನ್ನು ಕಣ್ತುಂಬಿಕಿಕೊಂಡಿದ್ದಾರೆ.

ಈ ಕುರಿತು, ಬಂಡೀಪುರ ಎಸಿಎಫ್ ನವೀನ್ ಕುಮಾರ್ ಮಾಹಿತಿ ಕೊಟ್ಟಿದ್ದು, ಅನಿಲ್ ಕುಂಬ್ಳೆ ಹಾಗೂ ಕೆಪಿಟಿಸಿಎಲ್ ಎಂಡಿ ಪಂಕಜ್ ಕುಮಾರ್ ಪಾಂಡೆ ಕುಟುಂಬ, ಸ್ನೇಹಿತರ ಜೊತೆ ಸಫಾರಿ ನಡೆಸಿದರು. ಹುಲಿ, ಕಾಡೆಮ್ಮೆ, ಆನೆ, ಜಿಂಕೆ ಸೇರಿದಂತೆ ವಿವಿಧ ವನ್ಯಜೀವಿಗಳು ದರ್ಶನ ಕೊಟ್ಟಿವೆ ಎಂದು ತಿಳಿಸಿದ್ದಾರೆ.

ಬಂಡೀಪುರಕ್ಕೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ನೀಡಿ ಸಫಾರಿ ನಡೆಸಿದ್ದರು. ಬಂಡೀಪುರದ ಎತ್ತರದ ಬೆಟ್ಟಗಳಲ್ಲಿ ಒಂದಾದ ಬೋಳಗುಡ್ಡಕ್ಕೆ ತೆರಳಿ ಇಡೀ ಕಾಡಿನ ಚೆಲುವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಗಮನ ಸೆಳೆದಿದ್ದರು.

ಇದನ್ನೂ ಓದಿ: ನಕಲಿ ವೆಬ್​ಸೈಟ್​ ಬಗ್ಗೆ ಎಚ್ಚರ ವಹಿಸಲು ಪ್ರವಾಸಿಗರಿಗೆ ಅರಣ್ಯಾಧಿಕಾರಿಗಳ ಸೂಚನೆ - Beware Of Fake Website

ETV Bharat Logo

Copyright © 2024 Ushodaya Enterprises Pvt. Ltd., All Rights Reserved.