ETV Bharat / snippets

ಶಾಲೆಗೆ ರಜೆ ಇದೆಯೆಂದು ನಕಲಿ ಆದೇಶದ ಪ್ರತಿ ವೈರಲ್ ಮಾಡುವವರ ವಿರುದ್ಧ ಕ್ರಮ: ಡಿಸಿ ಎಚ್ಚರಿಕೆ

ಡಿಸಿ ಮುಲ್ಲೈ ಮುಗಿಲನ್
ಡಿಸಿ ಮುಲ್ಲೈ ಮುಗಿಲನ್ (ETV Bharat)
author img

By ETV Bharat Karnataka Team

Published : Jul 18, 2024, 1:00 PM IST

ಮಂಗಳೂರು: ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಗುರುವಾರವೂ ಶಾಲೆಗಳಿಗೆ ರಜೆ ಇದೆ ಎಂದು ದ.ಕ. ಜಿಲ್ಲಾಧಿಕಾರಿಯವರ ನಕಲಿ ಆದೇಶದ ಪ್ರತಿ ವೈರಲ್ ಆಗಿದ್ದು, ಎಫ್ಐಆರ್​ ದಾಖಲಿಸಲಾಗುತ್ತದೆ ಎಂದು ಡಿಸಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಜುಲೈ 18ರಂದು ಶಾಲೆಗಳಿಗೆ ರಜೆ ಘೋಷಿಸಿರಲಿಲ್ಲ. ಆದರೆ ಡಿಸಿಯವರೇ ರಜೆ ಘೋಷಿಸಿದ್ದಾರೆ ಎಂಬ ನಕಲಿ ಆದೇಶದ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ರಾತ್ರಿ ವೈರಲ್​ ಆಗಿತ್ತು. ಇದು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಶಿಕ್ಷಕರನ್ನು ಗೊಂದಲಕ್ಕೀಡು ಮಾಡಿತ್ತು.

ಈ ಹಿಂದಿನ ಆದೇಶದ ಪ್ರತಿಯನ್ನು ಎಡಿಟ್​ ಮಾಡಿ, ಜೂನ್​ 18 ಎಂದು ತಿದ್ದಲಾಗಿದೆ. ಆದ್ದರಿಂದ ಇದನ್ನು ಸೃಷ್ಟಿಸಿದವರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಶಿವಮೊಗ್ಗ, ದಕ್ಷಿಣ ಕನ್ನಡದ ಶಾಲಾ ಕಾಲೇಜುಗಳಿಗೆ ಇಂದು ರಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.