ETV Bharat / snippets

ಬಾಗಲಕೋಟೆ: ಶೌಚಾಲಯದಲ್ಲಿ ಗಂಡು ಶಿಶುವಿನ ಮೃತದೇಹ ಎಸೆದ ಪಾಪಿಗಳು

Etv Bharat
Etv Bharat (Etv Bharat)
author img

By ETV Bharat Karnataka Team

Published : Sep 11, 2024, 5:52 PM IST

ಬಾಗಲಕೋಟೆ: ಶೌಚಾಲಯದಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಎಸೆದು ಹೋಗಿರುವ ಘಟನೆ ಬಾಗಲಕೋಟೆ ನಗರದ ಶಿರೂರ ಅಗಸಿ ಬಳಿ ನಡೆದಿದೆ. ಶಿಶುವನ್ನು ಎಸೆದು ಹೋಗಿರುವುದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಯಾರೂ ಇಲ್ಲದ ಸಮಯ ನೋಡಿಕೊಂಡು ರಟ್ಟಿನ ಬಾಕ್ಸ್​ನಲ್ಲಿ ಶಿಶುವಿನ ಮೃತದೇಹ ಇಟ್ಟು ಹೋಗಲಾಗಿದೆ. ಶಿಶು ಇನ್ನೂ ಸರಿಯಾಗಿ ಬೆಳವಣಿಗೆ ಹೊಂದಿರಲಿಲ್ಲ. ಹೀಗಾಗಿ, ಭ್ರೂಣ ಹತ್ಯೆ ನಡೆದಿರುವ ಸಂಶಯ ಮೂಡಿದೆ ಎನ್ನುತ್ತಾರೆ ಸ್ಥಳೀಯರು.

ಇತ್ತೀಚೆಗೆ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ದಾಖಲಾದ ಬೆನ್ನಲ್ಲೇ, ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.